ಹುಬ್ಬಳ್ಳಿ –
ಮಣಿಕಂಠ ಶ್ಯಾಗೋಟಿ ಗೆ ಪಕ್ಷದಲ್ಲಿ ಮಹತ್ವದ ಹುದ್ದೆ ನೀಡಿದ BJP – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ನಿಷ್ಠಾವಂತ ಶಿಷ್ಯನಿಗೆ ರಾಜ್ಯ ಘಟಕದಲ್ಲಿ ಉನ್ನತ ಹುದ್ದೆಯ ಜವಾಬ್ದಾರಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಆಪ್ತರಲ್ಲಿ ಒಬ್ಬರಾಗಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮಣಿಕಂಠ ಶ್ಯಾಗೋಟಿಯವರಿಗೆ ಬಿಜೆಪಿ ಪಕ್ಷದಲ್ಲಿ ಉನ್ನತವಾದ ಸ್ಥಾನವನ್ನು ನೀಡಲಾಗಿದೆ.
ಹೌದು ಈಗಾಗಲೇ ಕಳೆದ ಹಲವಾರು ವರ್ಷ ಗಳಿಂದ ಪಕ್ಷದಲ್ಲಿದ್ದುಕೊಂಡು ಪಕ್ಷ ಸಂಘಟನೆ ಯೊಂದಿಗೆ ಹಲವಾರು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರಿಗೆ ಬಿಜೆಪಿ ರಾಜ್ಯ ಘಟಕದಲ್ಲಿ ಉನ್ನತವಾದ ಹುದ್ದೆಯನ್ನು ನೀಡಲಾಗಿದೆ.
ಹೌದು ಭಾರತೀಯ ಜನತಾ ಪಕ್ಷದ ಎಸ್ ಸಿ ಮೋರ್ಚಾದ ರಾಜ್ಯ ಘಟಕದಲ್ಲಿ ಖಜಾಂಚಿಯ ನ್ನಾಗಿ ನೇಮಕ ಮಾಡಲಾಗಿದೆ.ರಾಜ್ಯಾಧ್ಯಕ್ಷ ಬಂಗಾರು ಹನಮಂತು ಅವರು ಮಣಿಕಂಠ ಶ್ಯಾಗೋಟಿ ಯವರನ್ನು ನೇಮಕ ಮಾಡಿ ಆದೇಶವನ್ನು ಮಾಡಿದ್ದಾರೆ.ಇದರೊಂದಿಗೆ ಮಣಿಕಂಠ ಅವರಿಗೆ ಸಧ್ಯ ಪಕ್ಷದಲ್ಲಿ ಉನ್ನತವಾದ ಹುದ್ದೆಯ ಗೌರವವನ್ನು ನೀಡಲಾಗಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..