ಕಲಘಟಗಿ –
ಪ್ರಹ್ಲಾದ್ ಜೋಶಿ ಪರವಾಗಿ ಪ್ರಚಾರಕ್ಕಿಳಿದ ಮಣಿಕಂಠ ಶ್ಯಾಗೋಟಿ ನೇತ್ರತ್ವದಲ್ಲಿನ ಟೀಮ್ ಎಸಿ ಟಿ ಸಮಾವೇಶ ಕುರಿತಂತೆ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಯಶಶ್ವಿಗೊಳಿಸಲು ದಿಟ್ಟಹೆಜ್ಜೆ ಇಟ್ಟ ಮಣಿ ಟೀಮ್
ಲೋಕಸಭಾ ಚುನಾವಣೆಯ ಅಖಾಡ ದೇಶದೆ ಲ್ಲೇಡೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಇತ್ತ ಧಾರವಾಡ ಜಿಲ್ಲೆಯಲ್ಲೂ ಕೂಡಾ ಜೋರಾಗಿದೆ ಜಿಲ್ಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪರವಾದ ಅಲೆ ಎಲ್ಲೇಡೆ ಕಂಡು ಬರುತ್ತಿದ್ದು ಈ ನಡುವೆ ಜಿಲ್ಲೆಯಲ್ಲಿ ಪ್ರಹ್ಲಾದ್ ಜೋಶಿಯವರು ಮಾಡಿರುವ ಕೆಲಸ ಕಾರ್ಯಗಳನ್ನು ತಿಳಿಸುತ್ತಾ ಪ್ರಚಾರ ಕಾರ್ಯದಲ್ಲಿ ಮಣಿಕಂಠ ಶ್ಯಾಗೋಟಿ ತೊಡಗಿದ್ದಾರೆ.
ಹೌದು ಕಲಘಟಗಿ ವಿಧಾನಸಭಾ ಕ್ಷೇತ್ರದ ತಬಕದಹೊನ್ನಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿ ಯಲ್ಲಿ ಬರುವ ಹಳ್ಳಿಗಳಲ್ಲಿ ಪ್ರಹ್ಲಾದ್ ಜೋಶಿ ಯವರ ಕಾರ್ಯಗಳನ್ನು ತಿಳಿಸುತ್ತಾ ಗ್ರಾಮ ಗ್ರಾಮಗಳಲ್ಲಿ ತಿರುಗಾಡುತ್ತಿದ್ದಾರೆ.ಇದೇ ವೇಳೆ ವಾಲ್ಮೀಕಿ ಸಮಾಜದ ಮುಖಂಡರ ಸಭೆ ಮಾಡಿ ಏಪ್ರೀಲ್ 13 ರಂದು ನಡೆಯಲಿರುವ ಎಸ್ ಟಿ ಸಮಾವೇಶದ ಕುರಿತಂತೆ ಚರ್ಚೆಯನ್ನು ಮಾಡಿದರು.
ಎಸ್ ಟಿ ಸಮಾಜದ ಸಮಾವೇಶ ಮಾಡುವದರ ಕುರಿತು ಮಾಹಿತಿ ನೀಡಿ ಹೆಚ್ಚಿನ ಪ್ರಮಾಣದಲ್ಲಿ ಜನಸಂಖ್ಯೆ ಸೇರಿಸುವ ಬಗ್ಗೆ ಚರ್ಚೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಧಾರವಾಡ ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ಲಕ್ಶ್ಮಣ ಮ್ಯಾಗಿನಮನಿ ರಾಜ್ಯ ಎಸ್ ಟಿ ಮೋರ್ಚಾ ಖಜಾಂಚಿಯಾದ ಮಣಿಕಂಠ ಶ್ಯಾಗೋಟಿ ಜಿಲ್ಲಾ ಪ್ರದಾನಕಾರ್ಯ ದರ್ಶಿ ಅಶೋಕ್ ಸೋಲಾರಗೊಪ್ಪ ಉಪಾಧ್ಯಕ್ಷ ರಾದ ಎಲ್ಲಪ್ಪ ಹೊಸಮನಿ ಹಾಗೂ ಸಮಾಜದ ಮುಖಂಡರು ಸೇರಿದಂತೆ ಹಲವರು ಉಪಸ್ಥಿತ ರಿದ್ದರು.
ಸುದ್ದಿ ಸಂತೆ ನ್ಯೂಸ್ ಕಲಘಟಗಿ……