ಪ್ಯಾರಿಸ್ –
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಖಾತೆ ತೆರೆದೆ ಭಾರತ ಏರ್ ಪಿಸ್ತೂಲ್ ಶೂಟಿಂಗ್ ನಲ್ಲಿ ಕಂಚು ಪದಕ ಪಡೆದ ಮನು ಭಾರ್ಕರ್…..ಮೊದಲ ಪ್ರಶಸ್ತಿ ಪಡೆದ ಕ್ರೀಡಾಪಟುವಿಗೆ ಹರಿದು ಬರುತ್ತಿದೆ ಅಭಿನಂದನೆಗಳ ಮಹಾಪೂರ…..
ಪ್ಯಾರಿಸ್ ನಲ್ಲಿ 2024 ರ ಒಲಿಂಪಿಕ್ಸ್ ಪಂದ್ಯಾವಳಿ ಆರಂಭಗೊಂಡಿವೆ.ಪಂದ್ಯಾವಳಿಯಲ್ಲಿ ಭಾರತ ದಿಂದ ಸಾಕಷ್ಟು ಪ್ರಮಾಣದಲ್ಲಿ ಕ್ರೀಡಾಪಟುಗಳು ಕೂಡಾ ಪಾಲ್ಗೊಂಡಿದ್ದು ಇನ್ನೂ ಈ ಒಂದು ಪಂದ್ಯಾವಳಿಯಲ್ಲಿ ಭಾರತದ ಪದಕ ಭೇಟೆ ಆರಂಭಗೊಂಡಿದ್ದು ಏರ್ ಪಿಸ್ತೂಲ್ ಶೂಟಿಂಗ್ನಲ್ಲಿ ಮನು ಭಾರ್ಕರ್ ಕಂಚು ಪದಕವನ್ನು ಮುಡಿಗಿ ಹಾಕಿಕೊಂಡಿದ್ದಾರೆ.
ಹೌದು ಪ್ಯಾರಿಸ್ ನಲ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಭಾರತ ಪದಕ ಭೇಟಿ ಆರಂಭಿ ಸಿದೆ. 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್ನ ಎರಡನೇ ದಿನ ಭಾರತಕ್ಕೆ ಶುಭ ಸುದ್ದಿ ಸಿಕ್ಕಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದಕ್ಕೆ ಕಂಚಿನ ಪದಕ ಸಿಕ್ಕಿದೆ.ಪ್ಯಾರಿಸ್ನಲ್ಲಿ ನಡೆದ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಮನು ಭಾಕರ್ ಕಂಚಿನ ಪದಕಕ್ಕೆ ಕೊರಳ್ಳೊಡಿ ದ್ದಾರೆ
ಈ ಮೂಲಕ ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಭಾರತಕ್ಕೆ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ.ಕಳೆದ ಒಲಿಂಪಿಕ್ಸ್ನಲ್ಲಿ ಅಂದರೆ 2020 ರಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್ನಲ್ಲಿ ಯಾವುದೇ ವಿಭಾಗದಲ್ಲೂ ಅರ್ಹತೆ ಪಡೆಯಲು ವಿಫಲರಾಗಿದ್ದ 22 ವರ್ಷದ ಮನು ಭಾಕರ್ ಅವರಿಗೆ ಇದು ಒಲಿಂಪಿಕ್ಸ್‌ನಲ್ಲಿ ಮೊದಲ ಪದಕವಾಗಿದೆ.
ಇನ್ನೂ ಪ್ರಶಸ್ತಿಯೊಂದಿಗೆ ದೇಶದ ಕೀರ್ತಿ ಪತಾಕೆ ಯನ್ನು ಹೆಚ್ಚಿಸಿದ ಮನು ಭಾಕರ್ ಅವರಿಗೆ ದೇಶದ ಮೂಲೆ ಮೂಲೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಶಾಸಕ ವಿನಯ ಕುಲಕರ್ಣಿ,ಕೆಎಮ್ ಎಫ್ ನಿರ್ದೇಶಕಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ,ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,ಸಚಿವ ಸಂತೋಷ ಲಾಡ್ ಸೇರಿದಂತೆ
ದೇಶದ ಮೂಲೆ ಮೂಲೆಗ ಳಿಂದ ರಾಜಕೀಯ ನಾಯಕರು ಗಣ್ಯರು ವಿವಿಧ ಕ್ಷೇತ್ರದ ಗಣ್ಯರು ಕಂಚಿನ ಪ್ರಶಸ್ತಿಯೊಂದಿಗೆ ದೇಶದ ಗೌರವವನ್ನು ಹೆಚ್ಚಿಸಿದ ಮನು ಭಾಕರ್ ಅವರಿಗೆ ಅಭಿನಂದ ನೆಗಳೊಂದಿಗೆ ಶುಭಾಶಯಗಳನ್ನು ಹೇಳಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಪ್ಯಾರಿಸ್……