ಹಾಸನ – ಸ್ವಾಮಿಜಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ.ಹಾಸನದ ಬಾಳೆಹೊನ್ನೂರು ಶಾಖಾಮಠದ ಸ್ವಾಮೀಜಿಯೇ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.

ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಕಾರ್ಜುವಳ್ಳಿಯ ಮಠದಲ್ಲಿಯೇ ನೇಣಿಗೆ ಶರಣು ಬಿಗಿದುಕೊಂಡು ಸ್ವಾಮಿಜಿ ಸಾವಿಗೆ ಶರಣಾಗಿದ್ದಾರೆ. ಶ್ರೀ ಮಠದ ಶ್ರೀ ಶಂಭುಲಿಂಗ ಸ್ವಾಮಿ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.ತಾಲ್ಲೂಕಿನ ವ್ಯಾಪ್ತಿಯಲ್ಲಿ ಹೆಚ್ಚು ಜನಪ್ರಿಯವಾಗಿದ್ದರು ಈ ಸ್ವಾಮಿಜಿ.

ಸ್ವಾಮೀಜಿ ಸಾವಿನಿಂದ ಭಕ್ತರಲ್ಲಿ ಆತಂಕ ಉಂಟಾಗಿದೆ.ಇನ್ನೂ ಮಾರ್ಗದರ್ಶನ ಮಾಡಬೇಕಾದ ಸ್ವಾಮೀಜಿಯವರ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ಪರಿಶೀಲನೆ ಮಾಡಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡ್ತಾ ಇದ್ದಾರೆ.