ಬೆಂಗಳೂರು –
ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಡಿಯಲ್ಲಿ ಸನ್ಮಾನ್ಯ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅಧ್ಯಕ್ಷತೆ ಯಲ್ಲಿ ಜರುಗಿದ ಜೂಮ್ ಸಭೆಯನ್ನು ಮಾಡಲಾಯಿತು
ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಈ ಒಂದು ಸಭೆಯಲ್ಲಿ ತಗೆದುಕೊಂಡ ನಿರ್ಣಯ ಗಳು ಈ ಕೆಳಗಿನಂತೆ ಇವೆ
👍 ಕಲಿಕಾ ಚೇತರಿಕೆ ತರಬೇತಿಯನ್ನು ಎಲ್ಲಾ ಶಿಕ್ಷಕರು ಪಡೆದುಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವುದು
👍 ಬರುವ ಶೈಕ್ಷಣಿಕ ವರ್ಷದಿಂದ ಮಕ್ಕಳ ದಾಖಲಾತಿಯ ಜೊತೆಗೆ 100% ಹಾಜರಾತಿಯ ಬಗ್ಗೆ ಹೆಚ್ಚಿನ ಗಮನ ನೀಡುವುದು
👍 ಶಾಲಾ ಪ್ರಾರಂಭೋತ್ಸವವನ್ನು ಅತ್ಯಂತ ವಿಜೃಂಭಣೆ ಯಿಂದ SDMC, ಸ್ಥಳೀಯರ ಸಹಯೋಗದೊಂದಿಗೆ ಶಾಲೆಯನ್ನು ತಳಿರು ತೋರಣಗಳೊಂದಿಗೆ ಶೃಂಗರಿಸಿ, ಮಕ್ಕಳನ್ನು ಸ್ವಾಗತ ಕೋರುವುದು.
👍 SDMC ಯವರಿಗೆ “ಕಲಿಕಾ ಚೇತರಿಕೆ” ಯ ಕುರಿತು ಶಾಲಾ ಪ್ರಾರಂಭೋತ್ಸವದ ಪೂರ್ವದಲ್ಲೆ ಸಭೆ ಕರೆದು ಮಾಹಿತಿ ನೀಡುವುದು.
👍 ಬರುವ ಶೈಕ್ಷಣಿಕ ವರ್ಷದಿಂದ ಮಾದರಿ ಶಾಲೆಗಳನ್ನು ಪ್ರಾರಂಭಿಸುತ್ತಿರುವುದರಿಂದ ಎಲ್ಲಾ ಅನುಷ್ಠಾನಾಧಿಕಾರಿ ಗಳು ಸಕ್ರೀಯವಾಗಿ ತೊಡಗಿಸಿಕೊಂಡು ಕಾರ್ಯನಿರ್ವಹಿ ಸುವುದು.
👍 ಮೇ 15 ರಂದು SDMC, ಸ್ಥಳೀಯವರ ಸಹಕಾರ ದಿಂದ ಶಾಲಾ ಶ್ರಮದಾನ ಮಾಡಿ ಶಾಲಾ ಪ್ರಾರಂಭೋತ್ಸ ವಕ್ಕೆ ಅಣಿಗೊಳಿಸುವುದು.
👍 ಹಳೆಯ ವಿದ್ಯಾರ್ಥಿಗಳ ಸಂಘಗಳನ್ನು ಬಳಸಿಕೊಂಡು ಶಾಲಾಭಿವೃದ್ಧಿಗೆ ಶ್ರಮಿಸುವುದು.
👍 ಅವಶ್ಯಕತೆಗನುಗುಣವಾಗಿ ಶಾಲಾ ಕಟ್ಟಡಗಳ ದುರಸ್ತಿ ಯ ಕುರಿತಾದ ಬೇಡಿಕೆ ನೀಡುವುದು.
👍 ಕೊರೋನಾ 4 ನೇ ಅಲೆಯ ಬಗ್ಗೆ ಎಚ್ಚರವಹಿಸುವುದು
👍 ಮಳೆಗಾಲ ಸಮೀಪಿಸುತ್ತಿರುವುದರಿಂದ ಶಾಲಾ ಕೋಣೆ & ಕಟ್ಟಡಗಳ ಕುರಿತು ಜಾಗೃತೆ ವಹಿಸುವುದು.