ಕೊಪ್ಪಳ –
ಸರಕಾರಿ ಶಾಲೆಯಲ್ಲಿನ ಕಂಪ್ಯೂಟರ್‌ಗಳನ್ನು ಕದ್ದೋಯ್ದ ಘಟನೆ ಕೊಪ್ಪಳ ದಲ್ಲಿ ನಡೆದಿದೆ ಹೌದು ಮನೆಗೆ ಅಂಗಡಿ ಗಳಿಗೆ ಬೇರೆ ಬೇರೆ ಕಡೆಗಳಲ್ಲಿ ಕಳ್ಳತನ ಮಾಡುವ ಖದೀಮರು ಸರ್ಕಾರಿ ಶಾಲೆಗೂ ಕೈಚಳಕ ತೋರಿದ್ದಾರೆ.
ಸರ್ಕಾರಿ ಪ್ರೌಢಶಾಲೆಯಲ್ಲಿ ಕಂಪ್ಯೂಟರಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದುರೆಮೊತಿ ಗ್ರಾಮ ದಲ್ಲಿ ಈ ಒಂದು ಘಟನೆ ನಡೆದಿದೆ.
ಮಕ್ಕಳ ಶಿಕ್ಷಣಕ್ಕಾಗಿ ಅಳವಡಿಸಿದ್ದ 10 ಕಂಪ್ಯೂಟರ್ ಗಳು ಸೇರಿದಂತೆ ಶಾಲೆಯಲ್ಲಿನ ಹಲವಾರು ವಸ್ತು ಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.
ಕಳೆದ ತಡರಾತ್ರಿ ಕಳ್ಳರ ಕೈಚಳಕ ಶಾಲೆಯಲ್ಲಿ ನಡೆದಿದೆ.ಲ್ಯಾಪ್‌ಟಾಪ್ ಸೇರಿದಂತೆ ಒಟ್ಟು 3 ಲಕ್ಷ 46 ಸಾವಿರ ಬೆಲೆಯ ಕಂಪ್ಯೂಟರ್ ಗಳ ಕಳ್ಳತನ ವಾಗಿವೆ.ಬೇವೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಸಧ್ಯ ಪ್ರಕರಣ ದಾಖಲು ಮಾಡಿ ಕೊಂಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ