ಬೆಂಗಳೂರು –
7ನೇ ವೇತನ ಆಯೋಗ ಮತ್ತು ಹಳೆಯ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಮಾರ್ಚ್ 1 ರಿಂದ ರಾಜ್ಯದ ಸರ್ಕಾರಿ ನೌಕರರ ಪ್ರತಿಭಟನೆ ನಡೆಯ ಲಿದೆ.ಈಗಾಗಲೇ ರಾಜ್ಯದ ತುಂಬೆಲ್ಲಾ ಈ ಒಂದು ಹೋರಾಟಕ್ಕೆ ನೌಕರರು ಸಿದ್ದರಾಗುತ್ತಿದ್ದು ಇನ್ನೂ ನೌಕರರ ಸಂಘವು ನೀಡಿರುವ ಗಡುವು ನಾಳೆ ಮುಕ್ತಾಯವಾಗಲಿದೆ.
ರಾಜ್ಯದ ಸರ್ಕಾರಿ ನೌಕರರು ಮುಖ್ಯಮಂತ್ರಿ ಯವರಿಗೆ ಬೇಡಿಕೆಗಳ ಕುರಿತು ಗಡುವು ನೀಡಿ ಸಮಯವನ್ನು ನೀಡಿ ದ್ದರು ಆದರೂ ಕೂಡಾ ಮುಖ್ಯಮಂತ್ರಿ ಇದನ್ನು ಗಂಭೀರವಾಗಿ ಪರಿಗಣಿ ಸದೇ ಮೌನವಾಗಿದ್ದಾರೆ.
ಈ ನಡುವೆ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯದ ಸರ್ಕಾರಿ ನೌಕರರ ಸಂಘವು ಕೆಲವೊಂದಿಷ್ಟು ಮಾರ್ಗಸೂಚಿ ಗಳನ್ನು ಬಿಡುಗಡೆ ಮಾಡಿದೆ ಹೋರಾಟದ ಕುರಿತು ಸಂಘವು ನೌಕರರಿಗೆ ಮಾರ್ಗಸೂಚಿ ಗಳನ್ನು ರಿಲೀಸ್ ಮಾಡಿದೆ
























