ಧಾರವಾಡ –
ಧಾರವಾಡದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘದಿಂದ ಬೃಹತ್ ಪ್ರತಿಭಟ ನೆಯನ್ನು ಮಾಡಲಾಯಿತು. ಹೌದು ನ್ಯೂ ಪೆನಷನ್ ಸ್ಕಿಮ್ ನ್ನು ರದ್ದು ಪಡಿಸಿ ಹಳೆ ಪೆನಷನ್ ಸ್ಕಿಮ್ ಜಾರಿಗೆ ತರಬೇಕೆಂದು ಪ್ರತಿಭಟನೆ ಮಾಡಿದರು
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಡಿ ಭಾಗಿಯಾಗಿ ನೌಕರರ ಹೋರಾಟದ ಧ್ವನಿ ಗೆ ಸಾಥ್ ನೀಡಿದರು ನಗರದ ಕಲಾಭವನ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ನಡೆಯಲಿರುವ ಪ್ರತಿಭಟನಾ ಮೆರವಣಿಗೆ ಸಾಗಿತು.
ಇದೆ ವೇಳೆ ಬಸವರಾಜ್ ಹೊರಟ್ಟಿ ಮಾತನಾಡಿ ಈ ಹಿಂದೆ ಕೂಡಾ ಪ್ರತಿಭಟನೆ ಮಾಡಿದ ವೇಳೆ ಡಿ ಕೆ ಶಿವಕುಮಾರ್ ಈ ಬಗ್ಗೆ ಮಾತನಾಡಿ ಹಳೇ ಪೆನಷನ್ ಪದ್ಧತಿ ತರುವ ಬಗ್ಗೆ ಮಾತನಾಡಿದರು
ದೇಶ ಹಾಗೂ ರಾಜ್ಯ ಹುಟ್ಟಿದಾಗಿನಿಂದ ಪೆನಷನ್ ಪದ್ದತಿ ಇದೆ ಸಂಬಳ ಕಡಿಮೆ ಕೊಡಲಿ ಆದರೆ ಪೆನಷನ್ ಕೊಡಲಿ ಎಂದು ಬೇಡಿಕೆ ಇದೆ ವಯಸ್ಸು ಆದಾಗ ಪೆನಷನ್ ಬೇಕಾಗುತ್ತದೆ ಎಂದರು
ನಾವು ವಿಧಾನ ಪರಿಷತ್ ಸದಸ್ಯರೆಲ್ಲೂ ಸೇರಿ ಶಿಕ್ಷಣ ಸಚಿವರ ಹಾಗೂ ಹಣಕಾಸು ಇಲಾಖೆ ಕಾರ್ಯದರ್ಶಿಗೆ ಭೇಟಿ ಮಾಡಿದ್ದೆವೆ ಎಂದರು ಸಿಎಂಗೆ ಕೂಡಾ ಈ ಬಗ್ಗೆ ಹೇಳಿದ್ದೆನೆ ಎಂದರು ಇದು ಯೋಗ್ಯ ಬೇಡಿಕೆ ಹೀಗಾಗಿ ಕೊಡಬೇಕು ಎಂದು ಒತ್ತಾಯ ಮಾಡ್ತೆನೆ ಎಂದು ಹೇಳಿದರು.
ಯಾರಿಗಾರದೂ ಅನ್ಯಾಯ ಆದರೆ ಅವರ ಪರ ನ್ಯಾಯಕ್ಕಾಗಿ ನಾನು ಇರ್ತೆನೆ.ಪಕ್ಷ ಜಾತಿ ಹಿಡಿದು ನಾನು ಇವತ್ತು ಹೋರಾಟಕ್ಕೆ ಬಂದಿಲ್ಲ ಸರ್ಕಾರ ದಲ್ಲಿ ನಾನು ಇದ್ದೆನೆ ಎಂದರೆ, ಅವರಿಗೆ ಮನವೊ ಲಿಸುವ ಕೆಲಸ ಮಾಡ್ತೆನೆ ಎಂದು ಹೇಳಿದರು
ನಾವೇ ಮೊದಲು ಸರ್ಕಾರದ ಗಮನಕ್ಕೆ ಇದನ್ನು ತಂದರೆ ಸರ್ಕಾರಕ್ಕೆ ಒಳ್ಳೆ ಹೆಸರು ಬರಲಿದೆ ಎಂದರು ಇನ್ನೂ ಇದೇ ವೇಳೆ ಜಿಲ್ಲೆಯ ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಸರ್ಕಾರಿ ನೌಕರರು ಈ ಒಂದು ಪ್ರತಿಭಟನೆ ಯಲ್ಲಿ ಪಾಲ್ಗೊಂಡು ಬೇಡಿಕೆ ಈಡೇರಿಕೆಗೆ ಜಿಲ್ಲಾಧಿಕಾರಿ ಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಯನ್ನು ಸಲ್ಲಿಸಿದರು.
https://youtu.be/X0PqdE_kgDAkgDA