ಬೆಂಗಳೂರು –
ರಾಜ್ಯದ 10 ಮಹಾನಗರ ಪಾಲಿಕೆಗಳ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಮೂಲಕ ಪ್ರಕಟಿಸಿದೆ. ಮೀಸಲಾತಿ ಪಟ್ಟಿ ಈ ಕೆಳಗಿನಂತಿದೆ.

10 ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಮೀಸಲಾತಿ ಪಟ್ಟಿ ಹೀಗಿದೆ……
- ಬಳ್ಳಾರಿ – ಮೇಯರ್ ಸ್ಥಾನಕ್ಕೆ ಸಾಮಾನ್ಯ ಅಭ್ಯರ್ಥಿಗೆ ಮೀಸಲಿದ್ದರೇ, ಉಪ ಮೇಯರ್ ಸ್ಥಾನ BCAW ಗೆ ಮೀಸಲಿದೆ.
- ಬೆಳಗಾವಿ – ಮೇಯರ್, ಸಾಮಾನ್ಯ, ಉಪ ಮೇಯರ್ ಸಾಮಾನ್ಯ ಮಹಿಳೆ
- ದಾವಣಗೆರೆ – ಮೇಯರ್ ಎಸ್ ಸಿ ಮಹಿಳೆ, ಉಪ ಮೇಯರ್ ಸಾಮಾನ್ಯ ಮಹಿಳೆ
- ಹುಬ್ಬಳ್ಳಿ-ಧಾರವಡ – ಮೇಯರ್ ಬಿಸಿಎ, ಉಪ ಮೇಯರ್ ಎಸ್ಸಿ ಮಹಿಳೆ
- ಕಲಬುರ್ಗಿ – ಮೇಯರ್ ಸಾಮಾನ್ಯ ಮಹಿಳೆ, ಉಪ ಮೇಯರ್ ಬಿಸಿಬಿ
- ಮಂಗಳೂರು – ಮೇಯರ್ ಸ್ಥಾನ ಸಾಮಾನ್ಯ, ಉಪ ಮೇಯರ್ ಸ್ಥಾನ BCAW ಗೆ ಮೀಸಲಿಡಲಾಗಿದೆ.
- ಶಿವಮೊಗ್ಗ – ಮೇಯರ್ ಸ್ಥಾನ BCAW, ಉಪ ಮೇಯರ್ ಸ್ಥಾನ G
- ತುಮಕೂರು – ಮೇಯರ್ ಎಸ್.ಟಿ, ಉಪ ಮೇಯರ್ ಸಾಮಾನ್ಯ ಮಹಿಳೆ
- ವಿಜಯಪುರ – ಮೇಯರ್ ಸ್ಥಾನ ಎಸ್ಸಿ, ಉಪ ಮೇಯರ್ BCA
- ಮೈಸೂರು – ಮೇಯರ್ ಸ್ಥಾನ GW, ಉಪ ಮೇಯರ್ G
ಹೀಗೆ ರಾಜ್ಯದ ಹತ್ತು ಮಹಾನಗರ ಪಾಲಿಕೆಯ ಮೀಸಲಾತಿ ಘೋಷಣೆ ಮಾಡಲಾಗಿದೆ. ಇನ್ನೂ ದುರ್ದೈವದ ಸಂಗತಿ ಎಂದರೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ಇನ್ನೂ ಹಲವು ಪಾಲಿಕೆಗೆ ಚುನಾವಣೆ ನಡೆಯಬೇಕಾಗಿದೆ ಚುನಾವಣೆ ಮುನ್ನವೇ ಮೇಯರ್ ಉಪಮೇಯರ್ ಮೀಸಲಾತಿ ಘೋಷಣೆ ಮಾಡಲಾಗಿದೆ.