ಸದಾಶಿವ ಆಯೋಗ ವರದಿ ಕುರಿತಂತೆ ವಿಧಾನ ಸಭೆಯಲ್ಲಿ ಚರ್ಚೆ ಮಾಡುವಂತೆ ಒತ್ತಾಯಿಸಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಮತ್ತು ಬಿಜೆಪಿ ಹಿರಿಯ ಮುಖಂಡ ತವನಪ್ಪ ಅಷ್ಟಗಿ ಅವರನ್ನು ಬೆಂಗಳೂರಿನಲ್ಲಿ ಧಾರವಾಡ ಜಿಲ್ಲೆಯ ಸಮಿತಿಯ ಸದಸ್ಯರು ಬೆಂಗಳೂರಿನಲ್ಲಿ ಭೇಟಿ ಮಾಡಿದರು.

ಶಾಸಕರ ಭವನದಲ್ಲಿ ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ ನೇತ್ರತ್ವದಲ್ಲಿ ಭೇಟಿ ಮಾಡಿದ ಸಮಿತಿಯ ಸದಸ್ಯರು ವರದಿ ಜಾರಿಗೆ ಕುರಿತಂತೆ ಮತ್ತು ಸಧ್ಯ ನಡೆಯುತ್ತಿರುವ ಅಧಿವೇಶನದಲ್ಲಿ ಚರ್ಚೆ ಮಾಡುವ ಕುರಿತಂತೆ ಒತ್ತಾಯವನ್ನು ಮಾಡಿದರು.

ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರನ್ನು ಸಮಿತಿಯ ಇಪ್ಪತ್ತಕ್ಕೂ ಹೆಚ್ಚು ಸದಸ್ಯರು ಈ ಕುರಿತು ಧ್ವನಿ ಎತ್ತಬೇಕು ಹಾಗೇ ಸದನದಲ್ಲಿ ಚರ್ಚೆ ಮಾಡುವಂತೆ ಸಮಿತಿಯ ಸದಸ್ಯರು ಒತ್ತಾಯವನ್ನು ಮಾಡಿದರು.

ಶಾಸಕರ ಭವನದಲ್ಲಿ ಭೇಟಿಯಾಗಿ ಮನವಿ ಮಾಡಿದರು.ಸಧ್ಯ ನಡೆಯುತ್ತಿರುವ ಸದನದಲ್ಲಿ ಸದಾಶಿವ ಆಯೋಗದ ವರದಿ ಕುರಿತಂತೆ ಧ್ವನಿ ಎತ್ತಿ ಕೂಡಲೇ ಜಾರಿಗೆ ಒತ್ತಾಯಿಸುವಂತೆ ಶಾಸಕರಿಗೆ ಸದಸ್ಯರು ಒತ್ತಾಯವನ್ನು ಮಾಡಿದರು.

ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ,ಸಂಗಮೇಶ ಮಾದರ, ರಾಕೇಶ ದೊಡಮನಿ, ಎಸ್ ಎನ್ ಬಿದರಳ್ಳಿ, ಕಲ್ಮೇಶ ಹಾದಿಮನಿ, ಬಾಳು ಹೊಸಮನಿ, ಕರಿಯಪ್ಪ ಹುಲಮನಿ, ಬಸವರಾಜ ಚಳಗೇರಿ, ಸುರೇಶ ಕೊಟೂರು, ಚಂದ್ರು ಹುಲಿಯನ್ನವರ, ನಿಂಗಪ್ಪ ಹಂಚಿನಾಳ, ಜಗದೀಶ್ ದೊಡಮನಿ ಸೇರಿದಂತೆ ಹಲವರು ಹಾಜರಿದ್ದರು