ಕೋಲಾರ –
ಪವಾಡ ರೀತಿಯಲ್ಲಿ ಬೇವಿನ ಮರದಲ್ಲಿ ಹಾಲಿನ ನೊರೆ ಬರುತ್ತಿದೆ.ಹೌದು ಇಂಥದೊಂದು ಪವಾಡ ಕೋಲಾರದಲ್ಲಿ ಕಂಡು ಬಂದಿದೆ. ಹೌದು ಕೋಲಾರದಲ್ಲಿ ಇಂತಹ ಸನ್ನಿವೇಶ ಕಂಡು ಬರುತ್ತಿದೆ.

ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಆಂಧ್ರ ಗಡಿ ಭಾಗದ ಐವಾರಹಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ಕಂಡು ಬಂದಿದೆ. ಬೇವಿನಮರದಲ್ಲಿ ಸುರಿಯುತ್ತಿರುವ ಹಾಲಿನ ನೊರೆ ನೋಡಲು ಮುಗಿಬಿದ್ದಿದ್ದಾರೆ ಗ್ರಾಮಸ್ಥರು
ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಅಂಧ್ರಗಡಿಭಾಗದ ಐವಾರಹಳ್ಳಿ ಗ್ರಾಮದಲ್ಲಿ ಇದು ಕಂಡು ಬಂದಿದ್ದು ಘಟನೆ ಬೆಳಕಿಗೆ ಬರುತ್ತಿದ್ದಂತೆ ನೋಡಲು ಸಾಕಷ್ಟು ಪ್ರಮಾಣದಲ್ಲಿ ಜನರು ಬರುತ್ತಿದ್ದಾರೆ.

ನೋಡುವುದರ ಜೊತೆಯಲ್ಲಿ ಇದೊಂದು ವಿಸ್ಮಯ ಎಂದುಕೊಂಡು ಬೇವಿನ ಮರಕ್ಕೆ ಜನರು ತಂಡೊಪ ತಂಡವಾಗಿ ಪೂಜೆ ಸಲ್ಲಿಸುತ್ತಿದ್ದಾರೆ ಗ್ರಾಮಸ್ಥರು.

ಹಾಲಿನ ದೃಶ್ಯವನ್ನು ನೋಡಲು ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಸಾಕಷ್ಟು ಪ್ರಮಾಣದಲ್ಲಿ ತಂಡೋಪತಂಡವಾಗಿ ಜನರು ಆಗಮಿಸುತ್ತಿದ್ದಾರೆ.ಇನ್ನೂ ಇದೊಂದು ಕೆಲ ಮರಗಳಲ್ಲಿ ನಡೆಯುವ ನೈಸರ್ಗಿಕ ಪ್ರಕಿಯೆ ಅಷ್ಟೇ ಎಂದಿದ್ದಾರೆ ತಜ್ಞರು.ಒಟ್ಟಾರೆ ಏನೇ ಆಗಲಿ ಬೇವಿನ ಮರದಲ್ಲಿ ಹಾಲು ಬರುತ್ತಿದ್ದು ಸಧ್ಯ ಕುತೂಹಲ ಮೂಡಿಸಿದೆ.