ಶಿವಮೊಗ್ಗ –
ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ಕ್ಷಣ ಕ್ಷಣಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ರಾಜ್ಯ ರಾಜಕೀಯದಲ್ಲಿ ದೊಡ್ಡ ಕೋಲಾ ಹಲವನ್ನೇ ಎಬ್ಬಿಸಿದ್ದು,ಈಗಾಗಲೇ ಈ ಒಂದು ಕೇಸ್ ರಾಜ್ಯ ಸರ್ಕಾರವನ್ನು ದೊಡ್ಡ ಇಕ್ಕಟ್ಟಿಗೆ ಸಿಲುಕಿಸಿದ್ದು ಇನ್ನೂ ಮತ್ತೊಂದೆಡೆ ಸಚಿವ ಈಶ್ವರಪ್ಪ ತಲೆದಂಡ’ಕ್ಕೆ ರಾಜ್ಯದೆಲ್ಲೆಡೆ ಸಾಕಷ್ಟು ಪ್ರಮಾಣಧಲ್ಲಿ ಒತ್ತಡ ಹೆಚ್ಚತೊಡಗಿದ್ದು ಇದೇಲ್ಲ ದರ ನಡುವೆ ಇತ್ತ ಸಚಿವ ಈಶ್ವರಪ್ಪ ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ.

ಮೈಸೂರಿನಿಂದ ಶಿವಮೊಗ್ಗಕ್ಕೆ ಈಶ್ವರಪ್ಪ ಹೊರಟಿದ್ದು ಮಧ್ಯಾಹ್ನ 12.30ಕ್ಕೆ ಆಗಮಿಸಿ ಬಳಿಕ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸಂತೋಷ್ ಆತ್ಮಹತ್ಯೆಗೂ ನನಗೂ ಯಾವುದೇ ಸಂಬಂ ಧವಿಲ್ಲ ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳುತ್ತಾರೆನಾ ಅಥವಾ ಸಂತೋಷ್ ಸಾವಿನ ಸುದ್ದಿ ಬಂದ ಬೆನ್ನಲ್ಲೇ ರಾಜೀನಾಮೆ ಘೋಷಣೆ ಮಾಡುತ್ತಾರೆನಾ ಎಂಬುದನ್ನು ಕಾದು ನೋಡ ಬೇಕು.ಇನ್ನೂ ಮತ್ತೊಂದೆಡೆ ಸಂತೋಷ್ ಸಾವಿಗೆ ಈಶ್ವ ರಪ್ಪ ಕಾರಣ ಅವರನ್ನು ಬಂಧಿಸೋವರೆಗೂ ಅಂತ್ಯಕ್ರಿಯೆ ಮಾಡಲ್ಲ ಎಂದು ಮೃತನ ಕುಟುಂಬ ಪಟ್ಟು ಹಿಡಿದಿದೆ ಅಲ್ಲದೇ ಸಂತೋಷ್ ಸಾವಿಗೆ ನ್ಯಾಯ ಕೊಡಿ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ಕೂಡಲೇ ಈಶ್ವರಪ್ಪರ ರಾಜೀ ನಾಮೆ ಪಡೆಯಬೇಕೆಂದು ವಿರೋಧ ಪಕ್ಷದವರು ಪಟ್ಟು ಹಿಡಿದಿದ್ದಾರೆ.ಹೀಗಾಗಿ ಇಷ್ಟೆಲ್ಲಾ ಬೆಳವಣಿಗೆ ನಡುವೆ ಈಶ್ವರಪ್ಪ ಕರೆದಿರುವ ಸುದ್ದಿಗೋಷ್ಠಿ ಭಾರೀ ಕುತೂಹಲ ಮೂಡಿಸಿದೆ. ಸುದ್ದಿಗೋಷ್ಠಿಯಲ್ಲೇ ರಾಜೀನಾಮೆ ಘೋಷಿ ಸುತ್ತಾರಾ ಇಲ್ಲವೇ ಸ್ಪಷ್ಟನೆ ನೀಡುತ್ತಾರೆನಾ ಎಂಬ ಪ್ರಶ್ನೆ ಯೊಂದಿಗೆ ಸುದ್ದಿಗೋಷ್ಠಿ ತೀವ್ರ ಕುತೂಹಲ ಕೆರಳಿಸಿದೆ..