ಹುಬ್ಬಳ್ಳಿ –
ತಂದೆ ಕಳೆದುಕೊಂಡ ಅನಾಥ ಮಗ ರಜತ್ ಎಂದು ಭಾವುಕರಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ರಜತ ಶೆಟ್ಟರ್ ಗಾಗಿ ಟಿಕೆಟ್ ತ್ಯಾಗ ಮಾಡಿದ್ರು. ಈಗ ಮತ್ತೆ ಕನಸು ಕಂಡಿದ್ದಾರೆ ಎಂದ ಸಚಿವೆ ಹೌದು ರಜತ ತಂದೆಯನ್ನು ಕಳೆದುಕೊಂಡ ಅನಾಥ ಮಗ.ಅವನ ಗೆಳೆಯರ ಬಳಗಕ್ಕೆ ನಾನು ಮನಸೋತಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಭಾವುಕರಾದ ಘಟನೆ ಹುಬ್ಬಳ್ಳಿಯಲ್ಲಿ ಕಂಡು ಬಂದಿತು
ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದ ರಜತ ಸಂಬ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇವತ್ತು ಅಳಿಯನ ಜನ್ಮದಿನ.ಆದ್ರೆ ಕಾಕತಾಳಿಯನೋ ಏನೋ ಇವತ್ತು ನನ್ನ ಜನ್ಮ ದಿನಾಚರಣೆ ಇದೆ.
ಬೆಂಗಳೂರಿನಲ್ಲಿ ಬಜೆಟ್ ಅಧಿವೇಶನ ಇದೆ.ಆದ್ರೆ ಅಳಿಯನಿಗಾಗಿ ಇಲ್ಲಿಗೆ ಬಂದಿದ್ದೇನೆ. ರಜತ್ ಲಕ್ಷ್ಮೀ ಹೆಬ್ಬಾಳ್ಕರ ಅಳಿಯ ಅಂತಾ ಹೇಳತಾರೆ.ಹಾಗಾಗಿ ರಾಜಕಾರಣದಲ್ಲಿ ಇದ್ದಾರೆ ಎಂದು ಬಹುತೇಕರು ಹೇಳ್ತಾರೆ.ಆದ್ರೆ ರಜತ್ ನನ್ನ ಮಗಳ ಮದುವೆ ಆಗುವುದಕ್ಕಿಂತ ಮೊದಲೇ ರಾಜಕಾರಣದಲ್ಲಿ ಇದ್ದವರು.
ಬಹುಶಃ ಅವನು ನನ್ನ ಅಳಿಯಾ ಆಗಿರೋದ್ರಿಂದ ರಾಜಕಾರಣದಲ್ಲಿ ಹಿಂದೆ ಇದ್ದಾರೆ.ರಜತ್ ಶೆಟ್ಟರ್ ಗಾಗಿ ಟಿಕೆಟ್ ತ್ಯಾಗ ಮಾಡಿದವರು.ಇವತ್ತು ಮತ್ತೆ ಕನಸು ಕಂಡಿದ್ದಾನೆ.ಆದ್ರೆ ಹೈಕಮಾಂಡ್ ತೀರ್ಮಾನವೇ ಅಂತಿಮ.ಪರೋಕ್ಷವಾಗಿ ರಜತ್ ಲೋಕಸಭೆ ಅಬ್ಯರ್ಥಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಮುನ್ಸೂಚನೆ ನೀಡಿದರು.
ಈ ಒಂದು ಅರ್ಥಪೂರ್ಣ ಕಾರ್ಯಕ್ರಮ ದಲ್ಲಿ ಹಾಸ್ಯ ಕಲಾವಿದರಿಂದ ಹಾಸ್ಯ ಸೇರಿದಂತೆ ಹಲವಾರು ಕಾರ್ಯಗಳು ನಡೆದವು. ವಿವಿಧ ಮಠಾಧೀಶರು ಸೇರಿದಂತೆ ಹಲವರು ಈ ಒಂದು ರಜತ್ ಸಂಭ್ರಮಕ್ಕೆ ಸಾಕ್ಷಿಯಾದ್ರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..