ಬೆಳಗಾವಿ –
ಹೌದು ಸಾಮಾನ್ಯವಾಗಿ ಸಚಿವರು ಎಂದರೆ ಸರ್ಕಾರಿ ಕಾರು ಅವರಿಗೆ ಯಾವುದೇ ರೀತಿ ಯಲ್ಲೂ ಸಂಚಾರಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ಕಾರಿನ ಮುಂದೆ ಎಸ್ಕಾರ್ಟ್ ಪೊಲೀಸ್ ವಾಹನ ಹೀಗಿರುವಾಗ ಬೆಳಗಾವಿ ಯಲ್ಲಿ ಇದ್ಯಾವುದು ಇಲ್ಲದೇ ರಸ್ತೆಯಲ್ಲಿ ಹೊರಟಿದ್ದ ಬೈಕ್ ವೊಂದರ ಮೇಲೆ ಏಕಾಎಕಿ ಯಾಗಿ ಹತ್ತಿಕೊಂಡು ಸಚಿವ ಮುರಗೇಶ ನಿರಾಣಿ ಬೆಳಗಾವಿಯ ವಿಧಾನ ಸೌಧ ಗೆ ಆಗಮಿಸಿ ಅಚ್ಚರಿಯನ್ನುಂಟು ಮಾಡಿದ್ದಾರೆ.
ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ಸುವರ್ಣ ಸೌಧಕ್ಕೆ ಬೈಕ್ನಲ್ಲಿ ಆಗಮಿಸಿದ್ದಾರೆ.ಸದನಕ್ಕೆ ಬರುತ್ತಿದ್ದ ಸಚಿವರಿಗೆ ದಾರಿ ಮಧ್ಯದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.ಹೀಗಾಗಿ ಕೊನೆಯಲ್ಲಿ ಬೈಕ್ ನ್ನು ಏರಿದ ಸಚಿವರು ಸುವರ್ಣ ವಿಧಾನಸೌಧವನ್ನು ತಲುಪಿ ದರು.ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವಕೀಲರು ನೇರವಾಗಿ ಸುವರ್ಣ ಸೌಧ ಒಳಗಡೆ ಪ್ರವೇಶಿಸಲು ಮುಂದಾ ಗಿದ್ದರು.ಭಾರೀ ಸಂಖ್ಯೆಯಲ್ಲಿ ವಕೀಲರು ಪ್ರತಿಭಟ ನೆಯಲ್ಲಿ ಭಾಗಿಯಾಗಿದ್ದರಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.ಹೀಗಾಗಿ ಸುವರ್ಣ ಸೌಧದಿಂದ ಹೊರಗಡೆ ತೆರಳಿದ್ದ ನಿರಾಣಿ ಮರಳಿ ಅಧಿವೇಶನಕ್ಕೆ ಬರುವಾಗ ಸಂಚಾರ ದಟ್ಟಣೆಯಿಂ ದಾಗಿ ಕಾರಿನಲ್ಲಿ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಕೊನೆಗೆ ಸಚಿವರು ಬೈಕ್ ನ್ನು ಏರಿ ಸುವರ್ಣ ಸೌಧಕ್ಕೆ ಮರಳಿದರು.
ಬೈಕ್ ನಲ್ಲೇ ಸಹಸವಾರರಾಗಿ ಸುವರ್ಣ ವಿಧಾನ ಸೌಧವನ್ನು ತಲುಪಿದ ಪ್ರಸಂಗವನ್ನು ನೋಡಿದ ಪೊಲೀಸರು ಅಧಿಕಾರಿಗಳು ಇನ್ನೂ ಕೆಲವರು ಅಚ್ಚರಿಗೊಂಡರು. ಬೇರೊಬ್ಬರೊಂದಿಗೆ ಬೈಕ್ ನಲ್ಲಿ ಸಹಸವಾರರಾಗಿ ಅವರು ಸುವರ್ಣ ವಿಧಾನಸೌಧವನ್ನು ತಲುಪಿದರು.
ಸುದ್ದಿ ಸಂತೆ ನ್ಯೂಸ್ ಬೆಳಗಾವಿ…..