ತುಮಕೂರು –
ಕರೋನ ಮಹಾಮಾರಿಯ ಆತಂಕದ ನಡುವೆಯೂ ಆಗಸ್ಟ್ 23 ರಿಂದ ರಾಜ್ಯದಲ್ಲಿ 9 ರಿಂದ ಶಾಲಾ ಕಾಲೇಜುಗಳು ಆರಂಭವಾಗುತ್ತಿವೆ.ಈಗಾಗಲೇ ಆರಂಭದ ಹಿನ್ನೆಲೆಯಲ್ಲಿ ಎಲ್ಲಾ ಸಿದ್ದತೆ ಗಳನ್ನು ಮಾಡಲಾಗಿದ್ದು ಇದರೊಂದಿಗೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅಧಿಕಾರಿಗಳೊಂದಿಗೆ ಸಭೆ ಮಾಡಿದರು

ಹೌದು ಆಗಸ್ಟ್ 23 ರಿಂದ ರಾಜ್ಯದಲ್ಲಿ ಪ್ರೌಢ ಶಾಲೆಯ 9 ಮತ್ತು 10ನೇ ಕ್ಲಾಸ್ ಭೌತಿಕ ತರಗತಿ ಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೈಗೊಂಡಿ ರುವ ಮತ್ತು ಕೈಗೊಳ್ಳಬೇಕಾದ ಸಿದ್ದತೆಗಳು ಕ್ರಮಗಳ ಕುರಿತು ಶಿಕ್ಷಣ ಸಚಿವರು ಸಭೆ ಮಾಡಿದರು

ತುಮಕೂರು ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ತುಮಕೂರಿನಲ್ಲಿ ಸಭೆ ನಡೆಸಲಾಯಿತು.ಈ ಒಂದು ಸಭೆಯಲ್ಲಿ ಪ್ರಮುಖವಾಗಿ ಸಿದ್ದತೆ ಕುರಿತು ಮಾಹಿತಿ ಪಡೆದುಕೊಂಡ ಸಚಿವರು ಕೆಲವೊಂದಿಷ್ಟು ಸೂಚನೆ ನೀಡಿದರು.
