ತುಮಕೂರು –
ಶಾಲಾ ಫೀಸ್ ಕಟ್ಟದೆ ಎಸ್ ಎಸ್ ಎಲ್ ಸಿ ಪರೀಕ್ಷೆ ವಂಚಿತಳಾಗುವನೆಂದು ಮನನೊಂದಿದ್ದ ಬಾಲಕಿಯ ಮನೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.ಹೌದು ತುಮಕೂರಿನ ಕೊರಟಗೆರೆಯ ಗ್ರೀಷ್ಮಾ ಮೂಡಬಿದ್ರೆಯ ಆಳ್ವಾಸ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ತರಗತಿಯಲ್ಲಿ ಓದುತ್ತಿದ್ದು ಪರೀಕ್ಷೆಯಿಂದ ವಂಚಿತಳಾಗಿ ಮನ ನೊಂದು ಸುರೇಶ್ ಕುಮಾರ್ ಗೆ ಪೋಷಕರು ಪತ್ರ ಬರೆದಿದ್ದರು

ಪೋಷಕರ ಪತ್ರದಿಂದ ಬೆಳ್ಳಂ ಬೆಳಗ್ಗೆ ಸುರೇಶ್ ಕುಮಾರ್ ಅವರ ಮನೆಗೆ ಇಂದು ಭೇಟಿ ನೀಡಿ ಗ್ರೀಷ್ಮಾಗೆ ಧೈರ್ಯ ತುಂಬಿದ್ದಾರೆ.ಇನ್ನೂ ಆಗಸ್ಟ್ ನಲ್ಲಿ ನಡೆಯೋ ಪೂರಕ ಪರೀಕ್ಷೆಯನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ಪರೀಕ್ಷೆ ಬರೆಯಲು ಶುಭಾಶಯ ಕೋರಿದ ಸಚಿವರು,ನಿನ್ನ ಜೊತೆ ನಾವಿದ್ದೇವೆ ಎಂದು ಅಭಯ ನೀಡಿದರು.

ಆದರೆ ಬಾಲಕಿ ಪರೀಕ್ಷೆಯಿಂದ ವಂಚಿತಳಾಗುವಂತೆ ಮಾಡಿದ ಶಾಲೆಯ ವಿರುದ್ದ ಯಾವುದೇ ಕ್ರಮವನ್ನು ತಗೆದುಕೊಳ್ಳುವ ಕುರಿತಂತೆ ಸಚಿವರು ಮಾತ್ರ ಯಾವುದನ್ನು ಹೇಳಲಿಲ್ಲ.