ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿನ ಚಕ್ಕಡಿ ರಸ್ತೆಗಳನ್ನು ವೀಕ್ಷಣೆ ಮಾಡಿದ ಸಚಿವ ಪ್ರಿಯಾಂಕ ಖರ್ಗೆ – ದೇಶದ ಬೆನ್ನೇಲುಬು ರೈತರಿಗಾಗಿ ಕೈಗೊಂಡ ಚಕ್ಕಡಿ ರಸ್ತೆಗಳ ಹರಿಕಾರ ಶಾಸಕ NH ಕೋನರೆಡ್ಡಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು…..

Suddi Sante Desk
ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿನ ಚಕ್ಕಡಿ ರಸ್ತೆಗಳನ್ನು ವೀಕ್ಷಣೆ ಮಾಡಿದ ಸಚಿವ ಪ್ರಿಯಾಂಕ ಖರ್ಗೆ – ದೇಶದ ಬೆನ್ನೇಲುಬು ರೈತರಿಗಾಗಿ ಕೈಗೊಂಡ ಚಕ್ಕಡಿ ರಸ್ತೆಗಳ ಹರಿಕಾರ ಶಾಸಕ NH ಕೋನರೆಡ್ಡಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು…..

ನವಲಗುಂದ

ನವಲಗುಂದ ವಿಧಾನ ಸಭಾ ಕ್ಷೇತ್ರದಲ್ಲಿನ ಚಕ್ಕಡಿ ರಸ್ತೆಗಳನ್ನು ವೀಕ್ಷಣೆ ಮಾಡಿದ ಸಚಿವ ಪ್ರಿಯಾಂಕ ಖರ್ಗೆ – ದೇಶದ ಬೆನ್ನೇಲುಬು ರೈತರಿಗಾಗಿ ಕೈಗೊಂಡ ಚಕ್ಕಡಿ ರಸ್ತೆಗಳ ಹರಿಕಾರ ಶಾಸಕ NH ಕೋನರೆಡ್ಡಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು

ಸಾಮಾನ್ಯವಾಗಿ ಜನಪ್ರತಿನಿಧಿಗಳು ಅವರವರ ಕ್ಷೇತ್ರದಲ್ಲಿ ಚರಂಡಿ,ರಸ್ತೆ,ಆ ಕೆಲಸ ಈ ಕೆಲಸ ಎನ್ನುತ್ತಾ ಏನೇಲ್ಲಾ ಕಾಮಗಾರಿಗಳನ್ನು ಮಾಡೊದನ್ನು ಕೇಳಿದ್ದೇವೆ ನೋಡಿದ್ದೇವೆ ಆದರೆ ಇಲ್ಲೊಬ್ಬ ಶಾಸಕರು ದೇಶದಲ್ಲಿ ಯಾರು ಯಾವ ಜನಪ್ರತಿಗಳು ಮಾಡಲಾರದ ಕೆಲಸವನ್ನು ತಮ್ಮ ಕ್ಷೇತ್ರದಲ್ಲಿ ಮಾಡಿ ಹೊಸದೊಂದು ಇತಿಹಾಸವನ್ನು ಬರೆದಿದ್ದಾರೆ.

ಹೌದು ಈ ಒಂದು ಮಾತಿಗೆ ಧಾರವಾಡ ಜಿಲ್ಲೆಯ ರೈತ ಬಂಡಾಯ ನೆಲದ ಶಾಸಕ ಎನ್ ಹೆಚ್ ಕೋನರೆಡ್ಡಿಯವರೇ ಸಾಕ್ಷಿ.ಕ್ಷೇತ್ರದಲ್ಲಿ ಏನೇಲ್ಲಾ ಬೇರೆ ಬೇರೆ ಅಭಿವೃದ್ದಿ ಕಾರ್ಯಗಳ ನಡುವೆ ದೇಶದ ಬೆನ್ನೇಲೆಬಾಗಿರುವ ರೈತರಿಗಾಗಿ ಚಕ್ಕಡಿ ರಸ್ತೆಗಳನ್ನು ಮಾಡುತ್ತಿದ್ದಾರೆ.ಕ್ಷೇತ್ರದಲ್ಲಿ ಈಗಾ ಗಲೇ ಸಾಕಷ್ಟು ರಸ್ತೆಗಳಿಗೆ ಹೊಸ ರೂಪವನ್ನು ನೀಡಿರುವ ಇವರ ಈ ಒಂದು ಚಕ್ಕಡಿ ರಸ್ತೆಗಳನ್ನು ಸಚಿವ ಪ್ರಿಯಾಂಕ ಖರ್ಗೆ ವೀಕ್ಷಣೆ ಮಾಡಿದರು.

ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೈತರುಗಳಿಗೆ ತಮ್ಮ ತಮ್ಮ ಜಮೀನುಗಳಿಗೆ ತೆರಳಿ ಕೃಷಿ ಚಟುವಟಿಕೆ ಮಾಡಲು ಕೃಷಿ ಉತ್ಪನ್ನಗಳನ್ನು ಸರಾಗವಾಗಿ ಸಾಗಿಸುವುದಕ್ಕಾಗಿ ಚಕ್ಕಡಿ ರಸ್ತೆ ಗಳನ್ನು ರೈತರ ಸಹಕಾರದಿಂದ ಸುಮಾರು‌ 30 ರಿಂದ 40 ಫೂಟ್ ವರೆಗೆ ಅಗಲೀಕರಣ ಮಾಡಿ ಮೊರಂ ಹಾಕಿ ಸುಗಮವಾಗಿ ಸಂಚರಿಸುವಂತೆ ಅಭಿವೃದ್ಧಿ ಮಾಡಿದ್ದಾರೆ.

ಈ ಒಂದು ರಸ್ತೆಗಳನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆಯವರು ವೀಕ್ಷಣೆ ಮಾಡಿದರು.ಗದಗ ನತ್ತ ತೆರಳುತ್ತಿರುವ ಸಂದರ್ಭದಲ್ಲಿ ಉಮಚಗಿ ಅಣ್ಣಿ ಗೇರಿಯಲ್ಲಿನ ಚಕ್ಕಡಿ ರಸ್ತೆ ಅಭಿವೃದ್ಧಿ ಪಡಿಸಿದ್ದನ್ನು ವೀಕ್ಷಿಸಿದರು.ಇದೇ ವೇಳೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿ ಶಾಸಕರಿಗೆ ಅಭಿನಂದನೆಗಳನ್ನು ಸಲ್ಲಿಸಿ ದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿ. ಒ. ಶ್ರೀಮತಿ ಸ್ವರೂಪ ಟಿ ಕೆ, ಇಲಾಖಾ ಆಡಳಿತ ಅಧಿಕಾರಿಗಳು, ಗ್ರಾಮದ ಗುರು ಹಿರಿಯರು ಡಿ ಜಿ ಜಂತ್ಲಿ, ಬಸವರಾಜ್ ಅಣ್ಣಿಗೇರಿ, ಗೊಲ್ಲಪ್ಪ ಜಂತ್ಲಿ, ಸುರೇಶ ಹಕಾರಿ, ಶಿವಕುಮಾರ್ ಮಂಟೂರ್, ಅಶೋಕ ಕತ್ತಿ, ಬಸವರಾಜ್ ಜಂತ್ಲಿ, ಬಸಪ್ಪ ನೆರೆಗಲ್, ಮಲ್ಲಪ್ಪ ಕಾಳಿ, ಪುರದಪ್ಪ ಜಂತ್ಲಿ, ಮೈಲಾರಪ್ಪ ಬೂದಿಯ, ದೇವಿಂದ್ರಪ್ಪ ಗಾಣಿಗೇರ

ಮಹೇಶ ಅಣ್ಣಿಗೇರಿ, ಸತೀಶ್ ಜಂತ್ಲಿ, ಲೋಕೇಶ್ ಸುಸರ್ವಿ, ಈರಣ್ಣ ಡಬ್ಬಿ,, ಕರಬಸಪ್ಪ ದೇವನೂರ, ಹೊನ್ನಪ್ಪ ನರೇಗಲ್ ಸೇರಿದಂತೆ ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ನವಲಗುಂದ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.