ಧಾರವಾಡ –
ಹುಟ್ಟು ಹಬ್ಬದ ಆಚರಣೆಯಲ್ಲೂ ಅರ್ಥಪೂರ್ಣ ಸಂದೇಶ ನೀಡಿದ ಸಚಿವ ಸಂತೋಷ ಲಾಡ್ – ನನ್ನ ಹುಟ್ಟು ಹಬ್ಬಕ್ಕೆ ನಿಮ್ಮೇಲ್ಲರ ಪ್ರೀತಿ ಅಭಿಮಾನ ಸಾಕು ಅನವಶ್ಯಕ ಖರ್ಚು ಮಾಡದೆ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಳ್ಳೇಯ ಕನ್ನಡ ಪುಸ್ತಕ ಕೊಡಿಸಿ ಎಂದ ಸಂತೋಷ ಲಾಡ್
ಸದಾ ಒಂದಿಲ್ಲೊಂದು ವಿಶೇಷ ಕಾರ್ಯಗಳ ಸಮಾಜ ಸೇವೆಯ ಮೂಲಕ ಜನಮಾನಸದ ಲ್ಲಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಕಲಘಟಗಿ ವಿಧಾನಸಭಾ ಕ್ಷೇತ್ರದ ಶಾಸಕ ಸಂತೋಷ ಲಾಡ್ ಹುಟ್ಟು ಹಬ್ಬದಲ್ಲಿ ಮತ್ತೊಂದು ವಿಶೇಷ ಸಂದೇಶದ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ.
ಹೌದು ಈಗಾಗಲೇ ವಿಶೇಷವಾದ ಸೇವೆಯ ಮೂಲಕ ಅರ್ಥಪೂರ್ಣವಾಗಿ ಜನ ಸೇವೆಯನ್ನು ಮಾಡುತ್ತಿರುವ ಸಂತೋಷ ಲಾಡ್ ಅವರಿಗೆ ಹುಟ್ಟು ಹಬ್ಬದ ಸಂಭ್ರಮ ಈ ಒಂದು ಸಂದರ್ಭ ದಲ್ಲಿ ಹುಟ್ಟು ಹಬ್ಬಕ್ಕೆ ಶುಭಾಶಯಗಳನ್ನು ಹೇಳಲು ಬರುವವರಿಗೆ ಸಚಿವರು ವಿಶೇಷವಾದ ಸೂಚನೆಯನ್ನು ನೀಡಿದ್ದಾರೆ.ನನ್ನ ಹುಟ್ಟುಹಬ್ಬಕ್ಕೆ ನಿಮ್ಮೆಲ್ಲರ ಪ್ರೀತಿ, ಅಭಿಮಾನಗಳೇ ಸಾಕು ಅನವಶ್ಯಕ ಖರ್ಚು ವೆಚ್ಚವನ್ನು ಮಾಡಬೇಡಿ ಹಾರವನ್ನು ತರಬೇಡಿ,ಉಡುಗೊರೆಯನ್ನು ನೀಡಬೇಡಿ,ಕೇಕ್ ತರಬೇಡಿ ಇನ್ನೂ ಪೇಟಗಳನ್ನು ಕೂಡಾ ತರಬೇಡಿ.
ಇವುಗಳ ಬದಲಾಗಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದೊಳ್ಳೆಯ ಕನ್ನಡ ಪುಸ್ತಕವನ್ನು ಕೊಡಿಸಿ ಅವರ ಶಿಕ್ಷಣಕ್ಕೆ ನಾವು ನೀವು ಕೂಡಾ ನೆರವಾಗೊಣಾ ಬಡ ರೋಗಿಗಳಿಗೆ ಆಸರೆಯಾಗಿ ಎಂಬ ಸಂದೇಶವನ್ನು ನೀಡಿದ್ದಾರೆ. ನಿಮ್ಮ ನಲ್ಮೆಯ ಆಶೀರ್ವಾದ ಮಾತ್ರ ನನಗೆ ಬೇಕು ನೆನಪಿರಲಿ.ಬದುಕಿನ ಮತ್ತೊಂದು ಹುಟ್ಟು ಹಬ್ಬಕ್ಕೆ ಚಿಯರ್ಸ್ ಎಂಬ ಸಂದೇಶವನ್ನು ಹುಟ್ಟು ಹಬ್ಬಕ್ಕೆ ಶುಭಾಶಯವನ್ನು ಕೋರಲು ಬರುವವ ರಿಗೆ ಹೇಳಿದ್ದಾರೆ
ಇದರೊಂದಿಗೆ ತಮ್ಮ ಹುಟ್ಟು ಹಬ್ಬದಲ್ಲೂ ಕೂಡಾ ಸಚಿವ ಸಂತೋಷ ಲಾಡ್ ವಿಶೇಷವಾದ ಸಂದೇ ಶದ ಮೂಲಕ ಸಾರ್ಥಕತೆಯನ್ನು ಮೆರೆದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..