ಬೆಂಗಳೂರು –
ಮೊನ್ನೆಯಷ್ಟೇ ಸಚಿವ ಸಂತೋಷ ಲಾಡ್ ರ ಪುತ್ರ ನ ಪುಸ್ತಕವು ಲೋಕಾರ್ಪಣೆಯಾಗಿತ್ತು ಬಿಡುಗಡೆ ಬೆನ್ನಲ್ಲೇ ಕುಟುಂಬದೊಂದಿಗೆ ಸಚಿವ ಸಂತೋಷ್ ಲಾಡ್ ಮುಖ್ಯಮಂತ್ರಿ ಅವರನ್ನು ಭೇಟಿಯಾದರು
ಹೌದು ಕರಣ್ ಲಾಡ್ ವಿರಚಿತ A_GLITCH_IN_THE_ SIMULATION’ ಕೃತಿಯನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ದಂಪತಿಗಳು ಮುಖ್ಯಮಂತ್ರಿಗಳಾದ ಸಿಧ್ದರಾಮ ಯ್ಯನವರಿಗೆ ನೀಡಿದರು.
ವಿಧಾನಸಭೆಯ ಕಾರ್ಯ- ಕಲಾಪದ ಒತ್ತಡಗಳ ಹಿನ್ನೆಲೆಯಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ಗೈರು ಆಗಿದ್ದ ಸಿಧ್ಧರಾಮಯ್ಯನವರು, ಕರಣ್ ಲಾಡ್ ಬರೆದ ಪುಸ್ತಕದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ
ಸಾಹಿತ್ಯ ಕೃಷಿಯಲ್ಲಿ ಮುಂದುವರೆಯಬೇಕೆಂದು ಆಶಿರ್ವದಿಸಿದರು.ಹುಟ್ಟು ಮತ್ತು ಸಾವಿನ ನಡುವೆ ನಡೆಯುವ ಸಂಘರ್ಷದಲ್ಲಿ ಮನುಷ್ಯನಾದವನ ಆದ್ಯತೆಗಳು ಹೇಗಿರಬೇಕೆಂಬ ತತ್ವ ಶಾಸ್ತ್ರದ ಮೂಲತತ್ವವನ್ನು ಆಯ್ದುಕೊಂಡು ರಚಿಸಿರುವ ಕೃತಿ ಇದಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..
ಕರಣ್ ಲಾಡ್, ಭಾರತದ ಸಾಹಿತ್ಯ ಪ್ರಕಾರದ ಮೈಲುಗಲ್ಲಾಗಲಿ ಎಂದು ಮಾನ್ಯ ಮುಖ್ಯಮಂತ್ರಿಗಳು ಆಶಯ ವ್ಯಕ್ತಪಡಿಸಿದರು.