ವಿಕಲಚೇತನ ನಾರಾಯಣ ನಿಗೆ ಆಸರೆಯಾದ ಸಚಿವ ಸಂತೋಷ ಲಾಡ್ – ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ಎರಡು ದಿನಗಳಲ್ಲಿ ನುಡಿದಂತೆ ನಡೆದು ಹೊಸ ಸ್ಕೂಟರ್ ವಿತರಣೆ ಮಾಡಿದ ಸಚಿವರು…..

Suddi Sante Desk
ವಿಕಲಚೇತನ ನಾರಾಯಣ ನಿಗೆ ಆಸರೆಯಾದ ಸಚಿವ ಸಂತೋಷ ಲಾಡ್ – ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ಎರಡು ದಿನಗಳಲ್ಲಿ ನುಡಿದಂತೆ ನಡೆದು ಹೊಸ ಸ್ಕೂಟರ್ ವಿತರಣೆ ಮಾಡಿದ ಸಚಿವರು…..

ಹುಬ್ಬಳ್ಳಿ

ವಿಕಲಚೇತನ ನಾರಾಯಣ ನಿಗೆ ಆಸರೆಯಾದ ಸಚಿವ ಸಂತೋಷ ಲಾಡ್ – ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ಎರಡು ದಿನಗಳಲ್ಲಿ ನುಡಿದಂತೆ ನಡೆದು ಹೊಸ ಸ್ಕೂಟರ್ ವಿತರಣೆ ಮಾಡಿದ ಸಚಿವರು.

ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ತುಂಬಾ ಅರ್ಥಪೂರ್ಣವಾಗಿ ವಿಶೇಷವಾಗಿ ಮಾಡುತ್ತಾ ಗಮನ ಸೆಳೆಯುತ್ತಿರುವ ಸಚಿವ ಸಂತೋಷ ಲಾಡ್ ಈಗ ಮತ್ತೊಂದು ಕೆಲಸದ ಮೂಲಕ ನೆರವಾಗಿದ್ದಾರೆ.ಹೌದು ಕಳೆದ ಅಕ್ಟೋಬರ್ 28 ರಂದು ಧಾರವಾಡದಲ್ಲಿ ನಡೆದ ಜಿಲ್ಲಾ ಕಟ್ಟಡ ಕಾರ್ಮಿಕರ ಸಮಾವೇಶದಲ್ಲಿ ಸಚಿವ ಸಂತೋಷ ಲಾಡ್ ಭಾಗವಹಿಸಿದ್ದರು.ಈ ಒಂದು ಸಮಯ ದಲ್ಲಿ ನಾರಾಯಣ ಶಿರಗುಪ್ಪಿ ಎಂಬ ಹಿರಿಯ ಕಟ್ಟಡ ಕಾರ್ಮಿಕರೊಬ್ಬರ ಕಾಲಿಗೆ ಪೆಟ್ಟು ಮಾಡಿ ಕೊಂಡಿರುವ ವಿಚಾರ ಸಂತೋಷ ಲಾಡ್ ಗಮನಕ್ಕೆ ಬಂದಿತ್ತು.

ಇನ್ನೂ ಇತ್ತ ನಡೆಯಲಾಗದ ಸ್ಥಿತಿಯಲ್ಲಿರುವ ನಾರಾಯಣ ನ ಪರಸ್ಥಿತಿಯನ್ನು ನೋಡಿದ ಸಚಿವರ ಗಮನಕ್ಕೆ ಬರುತ್ತಿದ್ದಂತೆ ಈ ಒಂದು ವಿಚಾರವನ್ನು ಗಂಭೀರವಾಗಿ ತಗೆದುಕೊಂಡು ನಾರಾಯಣನಿಗೆ ಏನಾದರೂ ಸಹಾಯ ಮಾಡು ತ್ತೇನೆ ಎಂದು ಹೇಳಿದ್ದರು.ಸಮಸ್ಯೆ ಗಮನಕ್ಕೆ ಬಂದು ನಾಲ್ಕೈದು ದಿನಗಳ ಒಳಗಾಗಿ ಸಧ್ಯ ನಾರಾಯಣನಿಗೆ ಸಚಿವ ಸಂತೋಷ ಲಾಡ್ ನೆರವಾಗಿದ್ದಾರೆ.ಅಸಹಾಯಕತೆಯನ್ನು ತೋಡಿ ಕೊಂಡಿದ್ದ ನಾರಾಯಣನಿಗೆ ಸಚಿವ ಸಂತೋಷ ಲಾಡ್ ವಯಕ್ತಿಕವಾಗಿ ನೆರವನ್ನು ನೀಡಿದ್ದಾರೆ.

ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ನಡೆಯಲು ಬಾದ ಈ ವಿಶೇಷ ಚೇತನ ನಾರಾ ಯಣನಿಗೆ ಹೊಸ ಸ್ಕೂಟರ್ ಕೊಡಿಸುವಂತೆ ಸೂಚಿಸಿದ ಬೆನ್ನಲ್ಲೇ ಕನ್ನಡ ರಾಜ್ಯೋತ್ಸವದ ದಿನದಂದು ಅವರಿಗೆ ಹೊಸ ಸ್ಕೂಟರ್ ವಿತರಿಸ ಲಾಯಿತು.

ನಾರಾಯಣ ಶಿರಗುಪ್ಪಿ ಅವರಿಗೆ ಈ ಸಣ್ಣ ಸಹಾಯ ಆಸರೆಯಾದರೆ ನಮ್ಮ ಪ್ರಯತ್ನ ಸಾರ್ಥಕವಾಯಿತು ಎಂಬ ಮಾತುಗಳನ್ನು ಸಚಿವರು ತಮ್ಮ ಫೇಸ್ ಬುಕ್ ನಲ್ಲಿ ಉಲ್ಲೇಖ ಮಾಡಿಕೊಂಡು ಸಧ್ಯ ಸಚಿವರ ಈ ಒಂದು ನಡೆಗೆ ಮೆಚ್ಚುಗೆ ಕಂಡು ಬರುತ್ತಿದೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.