ಕಾರವಾರ –
ಸೆಕ್ಸ್ ಸಿಡಿ ವಿಚಾರದಲ್ಲಿ ಮುಂದಿನ ಟಾರ್ಗೆಟ್ ನಾನೇ ಇರಬಹುದು ಹೀಗೆಂದು ಸಚಿವ ಶಿವರಾಮ್ ಹೆಬ್ನಾರ ಹೇಳಿದರು.ಕಾರವಾರದಲ್ಲಿ ಮಾತನಾಡಿದ ಅವರು ನಮ್ಮ ರಕ್ಷಣೆಗೊಸ್ಕರ ಕೋರ್ಟ್ ಮೊರೆ ಹೋಗಿದ್ದೇವೆ.ನಮ್ಮ ತೇಜೋವಧೆ ಮಾಡಿದರೇ ನಮಗೆ ಗತಿಯಾರು? ಇದೇ ಕಾರಣದಿಂದಾಗಿ ನಮ್ಮ ವಿರುದ್ಧದ ಯಾವುದೇ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿರುವುದಾಗಿ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದರು.

ಇನ್ನೂ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ರಾಜಕೀಯ ಪಿತೂರಿಯಾಗಿದೆ, ಬಿಜೆಪಿ ಸರ್ಕಾರ ಬರಲು ಕಾರಣರಾದವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದರು.ರಾಜಿನಾಮೆ ನೀಡಿ ಮುಂಬಯಿಗೆ ತೆರಳಿದ್ದ ಶಾಸಕರನ್ನು ಟಾರ್ಗೆಟ್ ಮಾಡಲಾಗಿದೆ, ಮುಂದಿನ ಬಲಿಪಶು ನಾನೇ ಆಗಿರಬಹುದು, ಹೀಗಾಗಿ ನಮ್ಮ ಸೇಫ್ಟಿಗೆ ನಾವು ಕೋರ್ಟ್ ಮೊರೆ ಹೋಗಿದ್ದೇವೆ ಎಂದರು. ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿದರೇ ಜನರು ನಮಗೆ ಗೌರವ ನೀಡುತ್ತಾರೆಯೇ ಎಂದು ಪ್ರಶ್ನಿಸಿದರು.