ಬೆಂಗಳೂರು –
ಅವರಿವರ ಹೆಸರನ್ನು ಹೇಳಿಕೊಂಡು ಸಾರ್ವಜನಿಕ ರಿಗೆ ಉದ್ಯೋಗದ ಕೊಡಿಸುವ ಭರವಸೆ ನೀಡಿ ಇತ್ತ ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ಭರವಸೆ ನೀಡಿ ಯಾವುದೇ ಕೆಲಸವನ್ನು ಮಾಡದೇ ವಂಚನೆ ಮಾಡಿದ ಕುರಿತಂತೆ ಸಮಾಜ ಕಲ್ಯಾಣ ಸಚಿವ ಶ್ರೀರಾಮಲು ಆಪ್ತ ಸಹಾಯಕ ರಾಜಣ್ಣ ಅವರನ್ನು ಬಂಧನ ಮಾಡಲಾಗಿದೆ.

ವಂಚನೆ ಕುರಿತಂತೆ ಕಳೆದ ಎರಡು ದಿನಗಳ ಹಿಂದೆ ಮೋಸಕ್ಕೆ ಒಳಗಾದವರು ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ದೂರನ್ನು ನೀಡಿದ್ದರು. ಅತ್ತ ದೂರು ದಾಖಲಾಗುತ್ತಿದ್ದಂತೆ ಇತ್ತ ಎರಡು ದಿನಗಳಿಂದ ಕಾಯುತ್ತಿದ್ದ ಪೊಲೀಸರು ಸಚಿವ ಶ್ರೀರಾಮಲು ಅವರ ಮನೆಯಲ್ಲಿಯೇ ರಾಜಣ್ಣ ಅವರನ್ನು ಬಂಧ ನ ಮಾಡಿ ಕರೆದುಕೊಂಡು ಹೋಗಿದ್ದಾರೆ. ಸಚಿವರು, ಸಿಎಂ ಕಚೇರಿ ಹೆಸರಲ್ಲಿ ಹಲವರಿಗೆ ಮೋಸ ಎಸಗಿದ ಆರೋಪದಡಿ ಇವರ ಮೇಲೆ ದೂರು ದಾಖಲಾಗಿತ್ತು ಹೀಗಾಗಿ ಇವರನ್ನು ಸಿಸಿಬಿ ಪೊಲೀಸರು ಬಂಧನ ಮಾಡಿ ವಶಕ್ಕೆ ತಗೆದುಕೊಂಡಿದ್ದಾರೆ.

ಕೆಲವರಿಗೆ ಕೆಲಸದ ಆಮಿಷ ನೀಡಿ ಇನ್ನೂ ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಆಮಿಷ ಒಡ್ಡಿ ಕೋಟ್ಯಾಂತರ ಹಣ ಕಬಳಿಕೆ ಮಾಡಿದ ಆರೋಪ ಕೇಳಿ ಬಂದಿದೆ.ಎರಡು ದಿನಗಳ ಹಿಂದೆ ರಾಜಣ್ಣ ವಿರುದ್ಧ ದೂರು ದಾಖಲಾಗಿತ್ತು ನಿನ್ನೆ ಬೆಳಗ್ಗೆಯಿಂದ ಇವರಿಗಾಗಿ ಕಾಯ್ದು ಕಾಯ್ದು ಸುಸ್ತಾಗಿದ್ದ ಸಿಸಿಬಿ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.ಶ್ರೀರಾಮುಲು ಹೆಸರಿನ ಜೊತೆಗೆ ವಿಜಯೇಂದ್ರ ಹೆಸರನ್ನು ರಾಜಣ್ಣ ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಅರೋಪ ಕೇಳಿಬಂದಿದ್ದು. ಬಿಜೆಪಿ ನಾಯಕ ಬಿ.ವೈ. ವಿಜಯೇಂ ದ್ರ ದೂರಿನ ಮೇಲೆ ರಾಜಣ್ಣ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಿಸಿಬಿ ಪೊಲೀಸರು ಬಂಧಿಸಲು ತೆರಳಿದ್ದಾಗ ಒಮ್ಮೆ ಗೆ ಬಂಧನಕ್ಕೆ ಅವಕಾಶ ನೀಡದೇ ರಾಜಣ್ಣ ದೊಡ್ಡ ನಾಟಕವಾಡಿದ್ದು ಕಂಡು ಬಂದಿತು ಪೊಲೀಸರ ಜತೆ ವಾದ ವಿವಾದ ನಡೆಸಿದರು.ಇದರೊಂದಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರ ಹೆಸರಲ್ಲೂ ಕೋಟ್ಯಾಂತರ ರೂಪಾಯಿ ವಸೂಲಿ ಮಾಡಿರುವ ಗಂಭೀರ ಆರೋಪ ರಾಜಣ್ಣ ವಿರುದ್ಧ ಕೇಳಿಬಂದಿದೆ. ಹಲವು ವರ್ಷಗಳಿಂದ ಶ್ರೀರಾಮುಲು ಹಾಗೂ ರೆಡ್ಡಿ ಕುಟುಂಬದ ಜತೆ ರಾಜಣ್ಣ ನಿಕಟ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.