ಹಾನಗಲ್ –
ಧಾರವಾಡ ಗ್ರಾಮೀಣ ಶಾಸಕರಾದ ಅಮೃತ್ ದೇಸಾಯಿ ಅವರು ಹಾನಗಲ್ ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸುವ ಮೂಲಕ ಗಮನ ಸೆಳೆದರು.ಬಿಜೆಪಿ ಪಕ್ಷದ ಅಭ್ಯರ್ಥಿಯಾದ
ಶಿವರಾಜ್ ಸಜ್ಜನರ ಅವರ ಪರವಾಗಿ ಬೊಮ್ಮನಹಳ್ಳಿ ಜಿಲ್ಲಾ ಪಂಚಾಯತ ಕ್ಷೇತ್ರದ ರತ್ನಾಪೂರ, ಬೊಮ್ಮನಹಳ್ಳಿ, ಯಳವತ್ತಿ,ಹಸನಬಾಡಿ,ಬೈಚವಳ್ಳಿ ಮತ್ತು ಹಾನಗಲ್ ಸೇರಿದಂತೆ ಪ್ರತಿ ಗ್ರಾಮದ ಮನೆ ಮನೆಗೆ ತೆರಳಿ ಮತ ಯಾಚಿಸಿದರು.
ಕೇಂದ್ರದಲ್ಲಿ ಪ್ರಧಾನಿ ಮೋದಿಯವರ ಹಾಗೂ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರ ಜನಪರ ಆಡಳಿತಕ್ಕೆ ಅಪಾರ ಬೆಂಬಲ ವ್ಯಕ್ತವಾಗಿದೆ.ಹಾನಗಲ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲುವು ಶತ ಸಿದ್ಧವಾಗಿದೆ ಎಂದು ಶಾಸಕ ಅಮೃತ ದೇಸಾಯಿಯವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ, ಸಂಸದರಾದ ಶಿವಕುಮಾರ ಉದಾಸಿ,ಮುಖಂಡರಾದ ತವನಪ್ಪ ಅಷ್ಟಗಿ,ಕೆಎಂಎಫ್ ಅಧ್ಯಕ್ಷರಾದ ಶಂಕರ ಮುಗದ, ರುದ್ರಪ್ಪ ಅರಿವಾಳ,ಸಂತೋಶಗೌಡ ಪಾಟೀಲ,ಬಸವರಾಜ ಹೊಸುರ,ನಾಗನಗೌಡ ಪಾಟೀಲ,ಶಂಕರ ಕೋಮಾರ ದೇಸಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.