ದುರ್ಗಾದೇವಿಗೆ ಪೂಜೆ ಸಲ್ಲಿಸಿ ಕ್ಷೇತ್ರದಲ್ಲಿ ತಾವು ಮಾಡಿದ ಅಭಿವೃದ್ದಿ ಕಾರ್ಯಗಳ ಭಿತ್ತಿ ಪತ್ರ ನೀಡಿ ಚುನಾವಣೆಯ ಕಹಳೆ ಊದಿದ ಶಾಸಕ_ಅಮೃತ_ದೇಸಾಯಿ – ಅಧಿಕಾರದ 4 ವರ್ಷ 10 ತಿಂಗಳ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಕರಪತ್ರವನ್ನು ನೀಡಿ ಕಮಲದ ಗುರ್ತಿಗೆ ಅತ್ಯಮೂಲ್ಯ ಮತ ನೀಡುವಂತೆ ಕೋರಿದ ಶಾಸಕರು…..

Suddi Sante Desk

ಧಾರವಾಡ

ರಾಜ್ಯದಲ್ಲಿ ಯಾವಾಗ ಚುನಾವಣೆ ಘೋಷಣೆ ಆಗುತ್ತದೆ ಎಂಬೊದು ಸಾಕಷ್ಟು ಪ್ರಮಾಣದಲ್ಲಿ ಕುತೂಹಲ ಕೆರಳಿಸಿದ್ದು ಈ ನಡುವೆ ಈಗಾಗಲೇ ಎಲ್ಲಾ ರಾಜಕೀಯ ಪಕ್ಷದವರು ಭರ್ಜರಿ ಯಾಗಿ ಚುನಾವಣೆ ಯ ಮೂಡ್ ನಲ್ಲಿ ತೊಡಗಿದ್ದು ಇತ್ತ ಧಾರವಾಡ 71 ಗ್ರಾಮೀಣ ಮತ ಕ್ಷೇತ್ರದಲ್ಲಿ ಶಾಸಕ ಅಮೃತ ದೇಸಾಯಿ ಈಗಲೇ ಪ್ರಚಾರ ಕಾರ್ಯ ಆರಂಭ ಮಾಡಿದ್ದಾರೆ.

ಶಿವಳ್ಳಿ ಗ್ರಾಮದ ಆರಾಧ್ಯ ದೇವತೆಯಾದ ದುರ್ಗಾದೇವಿಗೆ ಪೂಜೆ ಸಲ್ಲಿಸಿ ಕ್ಷೇತ್ರದಲ್ಲಿ ಶಾಸಕ_ಅಮೃತ_ದೇಸಾಯಿ ತಮ್ಮ ಅಧಿಕಾರದ 4 ವರ್ಷ 10 ತಿಂಗಳ ಅವಧಿಯಲ್ಲಿ ಶಿವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಾವು ಮಾಡಿದ ಅಭಿವೃದ್ಧಿ_ಕಾರ್ಯಗಳ_ಕರಪತ್ರ_ಪತ್ರವನ್ನು ನೀಡಿ ಕಮಲದ ಗುರ್ತಿಗೆ ತಮ್ಮ ಅತ್ಯಮೂಲ್ಯ ಮತವನ್ನು ನೀಡಿ ಎಂದು ಮತದಾರರಲ್ಲಿ ಮತ ಯಾಚಿಸಿದರು.

ಗ್ರಾಮದಲ್ಲಿ ಮನೆ ಮನೆಗೂ ತೆರಳಿದ ಶಾಸಕರು ಈಗಲೇ ಭರ್ಜರಿ ಯಾಗಿ ಪ್ರಚಾರ ಕಾರ್ಯವನ್ನು ಆರಂಭ ಮಾಡಿದರು ಈ ಒಂದು ಸಮಯದಲ್ಲಿ ಗ್ರಾಮದ ಗುರು ಹಿರಿಯರು ಪಕ್ಷದ ಕಾರ್ಯಕ ರ್ತರು ಸಾರ್ವಜನಿಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು

ಸುದ್ದಿ ಸಂತೆ ನ್ಯೂಸ್ ಹೆಬ್ಬಳ್ಳಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.