ಬೆಂಗಳೂರು –
ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಒಳ್ಳೇಯ ಸಮಸ್ಯೆ ಕುರಿತಂತೆ ಧ್ವನಿ ಎತ್ತಿದ್ದಾರೆ.ಹೌದು ಇಂದು ಸದನದಲ್ಲಿ ಇಂದು ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರಗಳಲ್ಲಿ ಬೇಕಾ ಬಿಟ್ಟಿಯಾಗಿ ತಲೆ ಎತ್ತುತ್ತಿರುವ ಅಕ್ರಮ ಬಡಾವಣೆಗಳ ಕುರಿತಂತೆ ಗಮನ ಸೆಳೆದರು.
ರೈತರಿಂದ ಕಡಿಮೆ ದರದಲ್ಲಿ ಕೃಷಿ ಭೂಮಿಗಳನ್ನು ಖರೀದಿ ಮಾಡಿ ಯಾವುದೇ ಅಭಿವೃದ್ದಿಯನ್ನು ಮಾಡದೇ ಬೇಕಾ ಬಿಟ್ಟಿಯಾಗಿ ನಿರ್ಮಾಣ ಮಾಡಿ ಇದರಿಂದ ನಗರದಲ್ಲಿ ಸಮಸ್ಯೆಗಳಾಗಿ ಸೌಂದರ್ಯ್ಯ ರಿಕರಣ ಹಾಳಾಗುತ್ತಿದ್ದು ಜೊತೆಗೆ ಈ ಒಂದು ಬಡಾವಣೆಗಳಿಗೆ ಮೂಲಭೂತ ಸೌಲಭ್ಯಗಳಿಲ್ಲದೇ ಸಾರ್ವಜನಿಕರು ಜನಪ್ರತಿನಿಧಿಗಳ ಮನೆಯ ಮುಂದೆ ಬಂದು ಹೋರಾಟ ಮಾಡುತ್ತಿದ್ದಾರೆ.
ಹೀಗಾಗಿ ಈ ಒಂದು ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ತಗೆದುಕೊಂಡು ಕೂಡಲೇ ಕಡಿವಾಣ ಹಾಕಬೇಕು ಒಂದು ಕಡೆಗೆ ನಗರದ ಸೌಂದರ್ಯ್ಯ ಹಾಳಾಗುತ್ತಿದ್ದು ಮತ್ತೊಂದೆಡೆ ಸಾರ್ವಜನಿಕರಿಗೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಅನಾನುಕೂಲವಾ ಗುತ್ತಿದೆ ಇದನ್ನು ಸರ್ಕಾರ ಈ ಕೂಡಲೇ ನಿಯಂತ್ರಣ ಮಾಡಬೇಕು ಅಲ್ಲದೇ ಇದರಿಂದಾಗಿ ಬೇರೆ ಬೇರೆ ಚಟುವಟಿಕೆಗಳು ನಡೆಯುತ್ತಿದ್ದು ಇದನ್ನು ಸರ್ಕಾರದ ಗಮನಕ್ಕೆ ತಗೆದುಕೊಂಡು ಬಂದರು.
ಇನ್ನೂ ಶಾಸಕರು ಎತ್ತಿದ ಪ್ರಶ್ನೆಗೆ ನಗರಾಭಿವೃದ್ದಿ ಸಚಿವ ಬಸವರಾಜು ಮಾತನಾಡಿದ ಈ ಕುರಿತಂತೆ ಇಲಾಖೆ ಈಗಾಗಲೇ ಸೂಕ್ತವಾದ ಕ್ರಮಗಳನ್ನು ತಗೆದುಕೊಂಡಿದ್ದು ಶೀಘ್ರದಲ್ಲೇ ಹುಬ್ಬಳ್ಳಿ ಧಾರವಾ ಡಕ್ಕೆ ಬಂದು ಒಂದು ಸಭೆ ಮಾಡೊದಾಗಿ ಹೇಳಿ ಶಾಸಕ ಅಮೃತ ದೇಸಾಯಿ ಅವರ ಧ್ವನಿಗೆ ಸ್ಪಂದಿಸಿ ದರು.
ಇನ್ನೂ ಇದೇ ವೇಳೆ ಹೀಗೆ ಮಾಡುತ್ತಿರುವವರ ಮೇಲೆ ಕ್ರೀಮಿನಲ್ ಮೊಕದ್ದಮೆ ದಾಖಲು ಮಾಡು ವಂತೆ ಶಾಸಕ ಅಮೃತ ದೇಸಾಯಿ ಆಗ್ರಹ ಮಾಡಿ ದರು.ಇನ್ನೂ ಇದೇ ವೇಳೆ ವಿಧಾನ ಸಭೆಯ ಸಭಾ ಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಹೀಗೆ ಮಾಡುತ್ತಿರುವ ಸ್ಥಳೀಯ ಅಧಿಕಾರಿಗಳ ವಿರುದ್ದ ಅಸಮಾಧಾನವನ್ನು ವ್ಯಕ್ತಪಡಿಸಿ ಈ ಒಂದು ಸಮಸ್ಯೆ ಕೇವಲ ಹುಬ್ಬಳ್ಳಿ ಧಾರವಾಡ ದಲ್ಲ ರಾಜ್ಯದ ಬಹುತೇಕ ನಗರ ಪ್ರದೇಶದ್ದಾಗಿದ್ದು ಹೀಗಾಗಿ ಇದನ್ನು ಗಂಭೀರವಾಗಿ ತಗೆದುಕೊಳ್ಳುವಂತೆ ಸೂಚನೆ ನೀಡಿದರು.