ಧಾರವಾಡ –
ಕ್ಷೇತ್ರದ ಮುಳಮುತ್ತಲ ಗ್ರಾಮದಲ್ಲಿ ನೂತನ ಶಾಲಾ ಕಟ್ಟಡವನ್ನು ಉದ್ಘಾಟನೆ ಮಾಡಲಾ ಯಿತು.ಹೌದು ಲೋಕೋಪಯೋಗಿ ಇಲಾಖೆಯ ಅಂದಾಜು 22 ಲಕ್ಷ ರೂ ಅನುದಾನದಲ್ಲಿ ನೂತನ ವಾಗಿ ನಿರ್ಮಿಸಲಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2 ಕಟ್ಟಡಗಳ ಉದ್ಘಾಟನೆ ಯನ್ನು ಮಾಡಲಾಯಿತು.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರ ಪ್ರೇರಿತ ಸಂಸ್ಥೆಯಾದ ಕ್ಷಮತಾ ಸೇವಾ ಸಂಸ್ಥೆ ಯಿಂದ ಹಮ್ಮಿಕೊಂಡ ಬಣ್ಣದರ್ಪನೆ (ಬಣ್ಣ ನಮ್ಮದು ಸೇವೆ ಸಮಯ ನಿಮ್ಮದು) ಎಂಬ ಸರಕಾರಿ ಶಾಲೆಗಳಿಗೆ ಬಣ್ಣ ಹಚ್ಚುವ ಅಭಿಯಾ ನದಡಿ ಬಣ್ಣ ಹಚ್ಚಿದ ಶಾಲೆಯ ವೀಕ್ಷಿಸಿ ಬಣ್ಣ ಹಚ್ಚಿ ಶಾಲೆಯ ಸೇವೆಗೈದ ಗ್ರಾಮದ ಯುವಕನಿಗೆ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ರುದ್ರಪ್ಪ ಅರಿವಾಳ,ಮಹದೇವಪ್ಪ ಹೊಸಮನಿ, ಮಲ್ಲಯ್ಯ ಹೀರೆಮಠ,ಗೂಳಪ್ಪ ಬೆಂಡಿಗೇರಿ, ಶಂಕ್ರಪ್ಪ ಬ್ಯಾಳಿ,ರಾಮಣ್ಣ ಕಲಾಲ,ಬಸನಗೌಡ ಪಾಟೀಲ, ಶಿವಾನಂದ ಬೆಂಡಿಗೇರಿ,ಗಂಗಮ್ಮ ನಿರಂಜನ,ಲಕ್ಷ್ಮೀ ಶಿಂದೆ,ಶಂಕರ ಕೊಮಾರ ದೇಸಾಯಿ ಹಾಗೂ ಗ್ರಾಮದ ಗುರು ಹಿರಿಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..