ಧಾರವಾಡ –
ಮೊನ್ನೆ ಮೊನ್ನೆಯಷ್ಟೇ ಹುಟ್ಟು ಹಬ್ಬದ ದಿನದಂದು ದಂಪತಿ ಸಮೇತವಾಗಿ ನೇತ್ರದಾನ,ರಕ್ತದಾನ ಮಾಡಿ ಈ ಒಂದು ಕಾರ್ಯಕ್ರಮದ ಮೂಲಕ ಗುರುತಿಸಿಕೊಂಡಿದ್ದ ಧಾರವಾಡ ದ ಶಾಸಕ ಅಮೃತ ದೇಸಾಯಿ ಈಹ ಮತ್ತೊಂದು ವಿಶೇಷ ಕಾರ್ಯಕ್ರಮ ವನ್ನು ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದಾರೆ.
ಹೌದು ಆ ಯೋಜನೆ ಈ ಯೋಜನೆ ಅನ್ನುತ್ತಾ ನೂರಾರು ಕೆಲಸ ಕಾರ್ಯಗಳ ಮಧ್ಯೆ ಈಗ ಕ್ಷೇತ್ರದ ಯುವಕರಿಗಾಗಿ ಮಹಾನ್ ಅರ್ಥಪೂರ್ಣವಾದ ಕಾರ್ಯಕ್ರಮ ವನ್ನು ಮಾಡತಾ ಇದ್ದಾರೆ.ಹೌದು ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಶಾಸಕ ಅಮೃತ ದೇಸಾಯಿ ಮಾರ್ಗದರ್ಶನದಲ್ಲಿ ಮತ್ತೊಂದು ಮಹಾನ್ ಕಾರ್ಯವನ್ನು ಮಾಡಲಾಗುತ್ತಿದೆ.
ಹೌದು ಅವರ ಅಭಿಮಾನಿಗಳ ವತಿಯಿಂದ ಮೊದಲ ಬಾರಿಗೆ ಗ್ರಾಮದಲ್ಲಿ ಉಚಿತ ಸೇನಾ ತರಭೇತಿ ಶಿಬಿರವನ್ನು ಆಯೋಜನೆ ಮಾಡಲಾಗಿದೆ.ಈ ಒಂದು ಶಿಬಿರಕ್ಕೆ ಶಾಸಕ ಅಮೃತ ದೇಸಾಯಿ ತಾಯಿ ಭಾರತಾಂಬೆಯ ಭಾವಚಿತ್ರಕ್ಕೆ ಪುರ್ಪಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.
ಇದೇ ವೇಳೆ ಶಿಬಿರದ ಎಲ್ಲಾ ವ್ಯವಸ್ಥೆ ಮತ್ತು ಸಿದ್ಧತೆ ಗಳನ್ನು ವೀಕ್ಷಣೆ ಮಾಡಿ ಮಾತನಾಡಿ ಈ ಒಂದು ಶಿಬಿರದ ಪ್ರಯೋ ಜನವನ್ನು ಪಡೆದುಕೊಂಡು ಬರುವ ಸೇನಾ ನೇಮಕಾತಿ ಯಲ್ಲಿ ಲಾಭವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು. ಹಾಗೇ ಇಂಥಹ ವಿಭಿನ್ನ ವಿಶೇಷವಾದ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿರುವ ಅಭಿಮಾನಿ ಬಳಗದ ಕಾರ್ಯವನ್ನು ಶ್ಲಾಘನೆ ಮಾಡಿದರು.ಇಂದಿನಿಂದ ಗ್ರಾಮ ದಲ್ಲಿ ಯುವಕರಿಗೆ ಉಚಿತವಾಗಿ ಸೇನೆಯಲ್ಲಿ ಸೇರಿಕೊ ಳ್ಳುವ ಕುರಿತಂತೆ ತರಭೇತಿ ಮಾರ್ಗದರ್ಶನ ಸೂಕ್ತವಾದ ಪಾಠ ಸಿಗಲಿದ್ದು ನುರಿತ ಟೀಮ್ ಮಾರ್ಗದರ್ಶನ ನೀಡಲಿದೆ
ಇನ್ನೂ ಈ ಒಂದು ಸಮಯದಲ್ಲಿ ಮಂಡಳ ಅಧ್ಯಕ್ಷರಾದ ರುದ್ರಪ್ಪ ಅರಿವಾಳ,ಗುರುನಾಥಗೌಡ ಗೌಡರ, ಯಲ್ಲಪ್ಪಾ ಜಾನಕುಣವರ, ಶಿವು ಬೇಳ್ಳಾರದ, ಶಂಕರ ಪಟ್ಟಣಶೆಟ್ಟಿ, ಶ್ರೀಮತಿ ಪಾರವಕ್ಕ ಮಲ್ಲಾಡದ, ಭೀಮಣ್ಣ ಚವಡನ್ನವರ, ವಿರೂಪಾಕ್ಷ ಯರಗಟ್ಟಿ, ಬಸು ಬಡಿಗೇರ, ಶ್ರೀಮತಿ ಸರೋಜಾ ಕಡ್ಲಿಮನಿ, ಬಸು ಹೊರಟ್ಟಿ, ಪಕ್ಕಿರಪ್ಪ ಪಾಟೀಲ, ಜಗದೀಶ ಬಳ್ಳುರ, ಮಂಜುನಾಥ ಬರಗಾಲ, ಉಸ್ಮಾನ್ ಗೊಲಂದಾಜ್, ರಾಕೇಶ ನಾಜರೆ, ಮಹಾದೇವಿ ಕೊಪ್ಪದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಇನ್ನೂ ಈ ಒಂದು ವಿಶೇಷವಾದ ಕಾರ್ಯಕ್ರಮದ ಮೂಲಕ ಶಾಸಕ ಅಮೃತ ದೇಸಾಯಿ ಕ್ಷೇತ್ರದ ಯುವಕರಿಗೆ ನೆರವಾಗುತ್ತಿದ್ದಾರೆ.