ಬಯಲುಸೀಮೆ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಂಡ ತವನಪ್ಪ ಅಷ್ಟಗಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿ ಯಾದರು ಶಾಸಕ ಅಮೃತ ದೇಸಾಯಿ,ಶಂಕರ ಮುಗದ ಮತ್ತು ಟೀಮ್…..

Suddi Sante Desk

ಚಿತ್ರದುರ್ಗ –

ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಧಾರವಾಡದ ಬಿಜೆಪಿ ಪಕ್ಷದ ಹಿರಿಯ ಮುಖಂಡರಾಗಿರುವ ತವನಪ್ಪ ಅಷ್ಟಗಿ ಇಂದು ಅಧಿಕಾರವನ್ನು ವಹಿಸಿಕೊಂಡರು ಹೌದು ಕರ್ನಾಟಕ ರಾಜ್ಯ ಸರ್ಕಾರದಿಂದ ನಿಯುಕ್ತರಾಗಿ ಮೊನ್ನೆ ಮೊನ್ನೆಯಷ್ಟೇ ಆದೇಶವಾಗಿತ್ತು ಇಂದು ಮಂಡಳಿ ಯ ಅಧ್ಯಕ್ಷರಾಗಿ ತವನಪ್ಪ ಅಷ್ಟಗಿ ಅಧಿಕಾರವನ್ನು ವಹಿಸಿ ಕೊಂಡರು.

ಚಿತ್ರದುರ್ಗದಲ್ಲಿರುವ ಕಚೇರಿಯಲ್ಲಿ ಶಾಸಕ ಅಮೃತ ದೇಸಾಯಿ ಕೆಎಮ್ ಎಫ್ ಅಧ್ಯಕ್ಷ ಶಂಕರ ಮುಗದ ಮತ್ತು ಇತರೊಂದಿಗೆ ಮೊದಲು ಪೂಜೆಯನ್ನು ಸಲ್ಲಿಸಿ ನಂತರ ಅಧಿಕಾರವನ್ನು ವಹಿಸಿಕೊಂಡರು.ಈ ಒಂದು ಸಮಯ ದಲ್ಲಿ ಶಾಸಕ ಅಮೃತ ದೇಸಾಯಿ ಮಾತನಾಡಿ ಪಕ್ಷವು ತವನಪ್ಪ ಅಷ್ಟಗಿ ಅವರ ಸೇವೆಯನ್ನು ಗುರುತಿಸಿ ಈ ಒಂದು ಜವಾಬ್ದಾರಿಯನ್ನು ನೀಡಿದ್ದು ಸಂತೋಷದ ವಿಚಾರವಾಗಿದ್ದು ಬಯಲು ಸೀಮೆ ಪ್ರದೇಶಾಭಿವೃದ್ದಿಯಲ್ಲಿ ಇವರಿಂದಾಗಿ ಸಾಕಷ್ಟು ಜನಪರ ಕೆಲಸ ಕಾರ್ಯಗಳಾಗಿ ಎಂದು ಶುಭ ಹಾರೈಸಿದರು.

ಇನ್ನೂ ಇದೇ ವೇಳೆ ಕೆಎಮ್ ಎಫ್ ಅಧ್ಯಕ್ಷ ಶಂಕರ ಮುಗದ ಸುನೀನ ಮೋರೆ,ಸೇರಿದಂತೆ ಹಲವರು ಕುಟುಂಬದವರು ಈ ಒಂದು ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗಿ ಶುಭ ಹಾರೈಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.