This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State Newsಧಾರವಾಡ

ಕ್ಷೇತ್ರದ ಜನರೇ ಮೆಚ್ಚುವಂತೆ ಅರ್ಥಪೂರ್ಣವಾಗಿ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡ ಶಾಸಕ ಅಮೃತ ದೇಸಾಯಿ – ಆರೋಗ್ಯವೇ ಭಾಗ್ಯ ಎನ್ನುತ್ತಾ ಅಮೃತ ಆರೋಗ್ಯ ಸೇವಾ ಶಿಬಿರಕ್ಕೆ ಸಾಕ್ಷಿಯಾದರೂ ಸಾವಿರಾರು ಜನರು ಗಣ್ಯರು ಹರಿದು ಬಂತು ಜನಸಾಗರ ಧಣಿ ಕಾರ್ಯಕ್ಕೆ ಮೆಚ್ಚುಗೆ

WhatsApp Group Join Now
Telegram Group Join Now

ಧಾರವಾಡ

ಪ್ರತಿಯೊಂದರಲ್ಲೂ ತುಂಬಾ ವಿಶೇಷವಾಗಿ ಅರ್ಥಪೂರ್ಣವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ಧಾರವಾಡದ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಈ ಬಾರಿ ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಅದರಲ್ಲೂ ನಾಲ್ಕಾರು ಜನರು ಮೆಚ್ಚಿಕೊಳ್ಳುವಂತೆ ಆಚರಣೆ ಮಾಡಿಕೊಂಡಿ ದ್ದಾರೆ

 

 

ಹೌದು ಒಂದು ಕಡೆ ಸಾಮಾನ್ಯವಾಗಿ ಯಾರೇ ಇರಲಿ ಆಪ್ತರು ಕುಟುಂಬದವರೊಂದಿಗೆ ಕೇಕ್ ಕತ್ತರಿಸಿಕೊಂಡು ಅದ್ದೂರಿಯಾಗಿ ಹುಟ್ಟು ಹಬ್ಬ ವನ್ನು ಆಚರಣೆ ಮಾಡಿಕೊಳ್ಳುತ್ತಾರೆ ಇನ್ನೂ ರಾಜ ಕಾರಣಿಗಳಂತೂ ಅದ್ದೂರಿಯಾಗಿ ಸಭೆ ವೇದಿಕೆ ಯ ಕಾರ್ಯಕ್ರಮವನ್ನು ಮಾಡಿಕೊಂಡು ಭರ್ಜರಿ ಯಾಗಿ ಆಚರಣೆ ಮಾಡಿಕೊಳ್ಳುತ್ತಾರೆ ಇದು ಸರ್ವೆ ಸಾಮಾನ್ಯವಾಗಿದ್ದು ಇದರ ನಡುವೆ ಇತ್ತ ಶಾಸಕ ಅಮೃತ ದೇಸಾಯಿ ತಮ್ಮ 45ನೇ ಹುಟ್ಟು ಹಬ್ಬ ವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿಕೊಂ ಡರು.

 

ಯಾವುದೇ ವೇದಿಕೆಯ ಸಮಾರಂಭವನ್ನು ಅಥವಾ ಇನ್ನೂ ಬೇರೆ ಯಾವುದಾದರೂ ಕಾರ್ಯಕ್ರಮವನ್ನು ಮಾಡದೇ ಶಾಸಕರನ್ನಾಗಿ ಮಾಡಿದ ಕ್ಷೇತ್ರದ ಜನರಿಗೆ ಆರೋಗ್ಯ ಸೇವಾ ಸೇವೆಯನ್ನು ನೀಡಿದ್ದಾರೆ.ಕಳೆದ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ನೇತ್ರದಾನದೊಂದಿಗೆ ಶಿಬಿರವನ್ನು ಹಮ್ಮಿಕೊಂಡಿದ್ದ ಇವರು ಈ ಬಾರಿ ಅಮೃತ ಆರೋಗ್ಯ ಸೇವಾ ಶಿಬಿರವನ್ನು ಹಮ್ಮಿಕೊಂಡಿ ದ್ದರು

 

ಗರಗ ಗ್ರಾಮದಲ್ಲಿ ಈ ಒಂದು ಕಾರ್ಯಕ್ರವು ಅದ್ದೂರಿಯಾಗಿ ನಡೆಯಿತು.ಗುರು ಮಡಿವಾಳೇ ಶ್ವರ ಮಠದ ಆವರಣದಲ್ಲಿ ಈ ಒಂದು ಉಚಿತ ಆರೋಗ್ಯ ಸೇವಾ ಶಿಬಿರ ಕಾರ್ಯಕ್ರಮ ಅರ್ಥ ಪೂರ್ಣವಾಗಿ ನಡೆಯಿತು.ಇದರೊಂದಿಗೆ ಶಾಸಕ ಅಮೃತ ದೇಸಾಯಿ ತಮ್ಮ ಜನ್ಮದಿನವನ್ನು ಅರ್ಥ ಪೂರ್ಣವಾಗಿ ಆಚರಿಸಿದರು.

 

ಗರಗ ಗ್ರಾಮದ ಶ್ರೀ ಗುರು ಮಡಿವಾಳೇಶ್ವರ ಮಠದ ಆವರಣದಲ್ಲಿ ಹಮ್ಮಿಕೊಂಡ ಸಾರ್ವ ಜನಿಕ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಕ್ಕೇ ಇಂದು ಚಾಲನೆ ನೀಡ ಲಾಯಿತು.ಈ ಬೃಹತ್ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಉತ್ತರ ಕರ್ನಾಟಕದ ಖ್ಯಾತ ತಜ್ಞ ವೈದ್ಯರ ತಂಡ ಒಂದೇ ಸೂರಿನಡಿ ವೈದ್ಯಕೀಯ ಸೇವೆ ನೀಡಿದರು. ಚಿಕಿತ್ಸೆಯ ಜೊತೆಗೆ ಉಚಿತವಾಗಿ ಅಗತ್ಯ ಔಷಧಿ ಮತ್ತು ಮಾತ್ರೆಗಳನ್ನು (ಮೆಡಿಸನ್)ಗಳನ್ನೂ ಕೂಡಾ ಉಚಿತವಾಗಿ ವಿತರಣೆ ಮಾಡಲಾಯಿತು.

ಇದಕ್ಕಾಗಿ ನಾಲ್ಕು ಕೌಂಟರ್ ಗಳನ್ನು ಮಾಡಲಾ ಗಿತ್ತು ಬೆಳಿಗ್ಗೆ 9 ಗಂಟೆಗೆ ಆರಂಭಗೊಂಡ ಶಿಬಿರ ದಲ್ಲಿ ಉತ್ಸಾಹದಿಂದ ಸಾರ್ವಜನಿಕರು ಪಾಲ್ಗೊಂಡು ಯಶಶ್ವಿಗೊಳಿಸಿದರು ಈ ಶಿಬಿರ ದಲ್ಲಿ ಬರೊಬ್ಬರಿ 11,230 ಜನರು ನೋಂದಣಿ ಮಾಡಿಸಿಕೊಂಡು ಶಿಬಿರದ ಲಾಭವನ್ನು ತಗೆದ ಕೊಂಡರು

ಇನ್ನೂ ಇದರೊಂದಿಗೆ 9 ಲಕ್ಷಕ್ಕೂ ಅಧಿಕ ಮೌಲ್ಯದ ಉಚಿತ ಔಷಧಿಗಳನ್ನು ನೀಡಲಾಯಿತು.ಶಾಸಕರ ಧರ್ಮಪತ್ನಿಯಾದ ಶ್ರೀಮತಿ ಪ್ರಿಯಾ ಅಮೃತ ದೇಸಾಯಿ ಅವರ ಮಕ್ಕಳಾದ ಹಂಸಿನಿ ದೇಸಾಯಿ ಸ್ವರೂಪಿಣಿ ದೇಸಾಯಿ,ಅರೋಷ್ರಿ ದೇಸಾಯಿ ಅವರು ಕೂಡ ಈ ಸೇವಾ ಕಾರ್ಯದಲ್ಲಿ  ನೋಂದಣಿ ಹಾಗೂ ವೃದ್ಧರಿಗೆ ಸೇವೆ ಸಲ್ಲಿಸಿದರು ಶಾಸಕ ಅಮೃತ ದೇಸಾಯಿ ಕೂಡಾ ಅತ್ತಿತ್ತ ಓಡಾಡುತ್ತಾ ಶಿಬಿರದತ್ತ ಆಗಮಿಸಿದ ವಯೋ ವೃದ್ದ ಅಜ್ಜಿಯಂದಿರರನ್ನು ಸ್ವತಃ ತಾವೇ ಕೈಹಿಡಿದು ಬರಮಾಡಿಕೊಂಡು ವೈಧ್ಯರ ಬಳಿ ಕರೆದುಕೊಂಡು ಹೋಗಿದ್ದು ವಿಶೇ,ವಾಗಿ ಕಂಡು ಬಂದಿತ

ಇದರೊಂದಿಗೆ ಇಲ್ಲಿಗೆ ಬಂದ ಸಾರ್ವಜನಿಕರಿಗೆ ಚಿಕಿತ್ಸೆಯ ನಂತರ ರುಚಿ ಕಟ್ಟಾದ ಬಗೆ ಬಗೆಯ ವೆರೈಟಿ ಊಟದ ಪ್ರಸಾದವನ್ನು ಕೂಡಾ ಮಠದ ಆವರಣದಲ್ಲಿ ಮಾಡಲಾಗಿತ್ತು ಚಿಕಿತ್ಸೆಯನ್ನು ಪಡೆದುಕೊಂಡ ಮಾತ್ರಗಳನ್ನು ಕೂಡಾ ತಗೆದು ಕೊಂಡು ನಂತರ ಹೊಟ್ಟೆ ತುಂಬಾ ಊಟವನ್ನು ಮಾಡಿ ಬಂದ ಜನರಿಗೆ ಹೋಗಲು ಮತ್ತು ಬರಲು ವಾಹನದ ವ್ಯವಸ್ಥೆಯನ್ನು ಪ್ರತಿಯೊಂದು ಗ್ರಾಮಕ್ಕೂ ಮಾಡಲಾಗಿತ್ತು ಇದರೊಂದಿಗೆ ಕಾರ್ಯಕ್ರಮದಲ್ಲಿ ತಡಕೋಡ ಗ್ರಾಮದ  ಅಜ್ಜನ ಗೌಡ ಪಾಟೀಲ್,ಕುಮಾರಸ್ವಾಮಿ ಯರಗಂಬ್ಲಿ ಮಠ, ಶಿವಲಿಂಗಪ್ಪ ಸುಣಕದ, ಸಂಗಪ್ಪ, ಅಬ್ಬಾರ್, ಬಸಪ್ಪ ಲಂಗೋಟಿ, ಈರಣ್ಣ ಟಿ ಸೊಪ್ಪಿನ್,ಈರಣ್ಣ ಮಟಗೊಡ್ಲಿ, ಮಹಾಬಳೆಶ್ವರ ಮರಿಗೌಡರ, ಈರಪ್ಪ ಹಿರಳಿ ಭಾರತೀಯ ಜನತಾ ಪಾರ್ಟಿ ಸಿದ್ಧಾಂತಗಳನ್ನು ಮೆಚ್ಚಿಕೊಂಡು ಪಕ್ಷ ಸೇರ್ಪಡೆಯಾದರು

.ಇನ್ನೂ ಈ ಒಂದು ಅರ್ಥಪೂರ್ಣವಾದ ಕಾರ್ಯಕ್ರಮಕ್ಕೆ  ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ್ರ,ಕೆಎಮ್ ಎಫ್ ಅಧ್ಯಕ್ಷ ಶಂಕರ ಮುಗದ,ಬಯಲು ಸೀಮೆ ಪ್ರದೇಶದ ಅಧ್ಯಕ್ಷ ತವನಪ್ಪ ಅಷ್ಟಗಿ,ಮಾಜಿ ಶಾಸಕ ಸೀಮಾ ಮಸೂತಿ,ಶ್ರೀಮತಿ ಪ್ರೇಮಾ ಕೋಮಾರ ದೇಸಾಯಿ,ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರ ಆಪ್ತ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ,ಮಹಾದೇವ ಅಳಗವಾಡಿ,ಶಕ್ತಿ ಹಿರೇಮಠ,ಅಶೋಕ ದೇಸಾಯಿ,ಅಶೋಕ ದೇಶಪಾಂಡೆ,ಶರಣು ಅಂಗಡಿ,ಅನುಪ ಬೀಜವಾಡ,ಶಂಕರ ಕೋಮಾರ ದೇಸಾಯಿ, ರುದ್ರಪ್ಪ ಹರಿವಾಳ, ಸೇರಿದಂತೆ ಪಕ್ಷದ ಕಾರ್ಯ ಕರ್ತರು ಹುಬ್ಬಳ್ಳಿ ಧಾರವಾಡದ ಹೆಸರಾಂತ ನುರಿತ ವೈದ್ಯರು,ಪಕ್ಷದ ಹಿರಿಯರು ಹಾಗೂ ಅನೇಕ ಕಾರ್ಯಕರ್ತರು ಈ ಒಂದು

ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಅಮೃತ ಆರೋಗ್ಯ ಸೇವಾ ಶಿಬಿರವನ್ನು ಯಶಶ್ವಿಗೊಳಿಸಿದರು.

 

ವರದಿ – ಚಕ್ರವರ್ತಿ,ಗೋಪಿ ಜೊತೆ ವೆಂಕಟೇಶ್ ಸುದ್ದಿ ಸಂತೆ ನ್ಯೂಸ್ ಧಾರವಾಡ


WhatsApp Group Join Now
Telegram Group Join Now
Suddi Sante Desk