ಧಾರವಾಡ –
ಜನ ಈ ಬಾರಿ ನಿಮ್ಮನ್ನು ಮನೆಗೆ ಕಳುಹಿಸುವ ಕೆಲಸ ಮಾಡುತ್ತಾರೆ ಎಂದು ಶಾಸಕ ಅಮೃತ ದೇಸಾಯಿ ಅವರಿಗೆ ಟಾಂಗ್ ಕೊಟ್ಟಿರುವ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರಿಗೆ ಶಾಸಕ ಅಮೃತ ದೇಸಾಯಿ ಅವರು ಪ್ರತಿ ಟಾಂಗ್ ಕೊಟ್ಟಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಶಾಸಕ ಅಮೃತ ದೇಸಾಯಿ ನನ್ನನ್ನು ಮನೆಗೆ ಕಳುಹಿಸಲು ಇವರ್‍ಯಾರು ನಾನು ನನ್ನ ಮನೆಯಲ್ಲೇ ಇರುತ್ತೇನೆ ಬೇರೆಯವರ ಮನೆಯಲ್ಲಿ ಇರೋದಿಲ್ಲ ಎಂದಿದ್ದಾರೆ.ಯಡಿಯೂರಪ್ಪ ಸಿಎಂ ಆದ ಸಂದರ್ಭದಲ್ಲಿ ನೆರೆ ಪ್ರವಾಹ ಕೊರೊನಾ ಹಾವಳಿ ಜೋರಾಗಿತ್ತು.
ಆಗಿನ ಸಂದರ್ಭದಲ್ಲಿ ಪ್ರತಿ ಮನೆ ಮನೆಗೆ ಭೇಟಿ ಕೊಟ್ಟು ರೈತರಿಗೆ ಪರಿಹಾರ ಕೊಡಿಸಿದ್ದೇನೆ.ನನಗೆ ಬೇಕಾದವರಿಗೆ ಮನೆ ಹಾಕಿಸಿಕೊಟ್ಟಿದ್ದೇನೆ ಎಂದು ಆರೋಪ ಮಾಡಿದ್ದಾರೆ.ಎಲ್ಲವನ್ನೂ ಪರಿಶೀಲಿಸಿ ನಾನೇ ಸಹಿ ಮಾಡಿ ಶಾಸಕರ ಅನುಮೋದನೆ ಕೊಟ್ಟಿದ್ದಾರೆ ಎಂದು ಎಲ್ಲಾದರೂ ಇದೆಯಾ? ಅಥವಾ ಹಾಗೆ ಮಾಡಲು ಆಗುತ್ತದೆಯಾ? ಎಂದು ಪ್ರಶ್ನೆ ಮಾಡಿದರು.
ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಕಡಿಮೆ ಪರಿ ಹಾರ ಬಂದರೆ ಬೇಡ.ನನ್ನ ಹೊಲವನ್ನಾದರೂ ಮಾರಿ ಪರಿಹಾರ ಕೊಡುತ್ತೇನೆ ಎಂದು ಹೇಳಿದ್ದೆ.ಆ ಪ್ರಕಾರ ಪ್ರಾಮಾಣಿಕವಾಗಿ ನಾನು ಪರಿಹಾರ ಕೊಡಿಸುವ ಕೆಲಸ ಮಾಡಿದ್ದೇನೆ ಎಂದರು.
ಧಾರವಾಡದಲ್ಲಿ ಮೊದಲು ಗೂಂಡಾ ರಾಜಕಾ ರಣ ಇತ್ತು.ನನ್ನ ಅವಧಿಯಲ್ಲಿ ಅಧಿಕಾರಿಗಳೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ.ಕೊಂಚ ಮಟ್ಟಿಗಾದರೂ ನಾವು ಗೂಂಡಾ ರಾಜಕಾರಣ ವನ್ನು ತಡೆಗಟ್ಟಿದ್ದೇವೆ. 85 ಸಾವಿರ ಮತ ಹಾಕಿ ಜನ ನನ್ನನ್ನು ಶಾಸಕನನ್ನಾಗಿ ಮಾಡಿದ್ದಾರೆ ಎಂದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..