ಬೆಂಗಳೂರು –
ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವನ್ನು ವಹಿಸಿಕೊಂಡ ಬಸವರಾಜ ಬೊಮ್ಮಾಯಿ ಅವರನ್ನು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

ಮುಖ್ಯಮಂತ್ರಿಯಾಗುತ್ತಿದ್ದಂತೆ ಶಾಸಕ ಅಮೃತ ದೇಸಾಯಿ ಅವರು ತೆರಳಿ ಹೂಗುಚ್ಚವನ್ನು ನೀಡಿ ಕ್ಷೇತ್ರದ ಜನರ ಪರವಾಗಿ ಮತ್ತು ವಯಕ್ತಿಕವಾಗಿ ಅಭಿನಂದನೆ ಸಲ್ಲಿಸಿದರು.ಇದೇ ವೇಳೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೂ ಕೂಡಾ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

ಇದೇ ವೇಳೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲವೊಂದಿಷ್ಟು ಮಾಹಿತಿ ಯನ್ನು ಶಾಸಕರ ಕುರಿತಂತೆ ಹೇಳಿದರು.ಇದು ಶಾಸಕ ಅಮೃತ ದೇಸಾಯಿ ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.

ಶಾಸಕರೊಂದಿಗೆ ಧಾರವಾಡ ಕೆಎಮ್ಎಫ್ ನಿರ್ದೇ ಶಕರಾದ ಶಂಕರ ಮುಗದ,ಅಶೋಕ ದೇಸಾಯಿ, ತವನಪ್ಪ ಅಷ್ಟಗಿ,ಮಹೇಶ ಯಲಿಗಾರ, ರಾಜು ಜೀವನ್ನವರ,ಸಂತೋಷಗೌಡ ಪಾಟೀಲ, ವಿಠ್ಠಲ ಪೂಜಾರ,ಬಸವರಾಜ ಹೊಸೂರ, ಬಸು ಕೋರಿ ಕೊಪ್ಪ,ರಾಜು ಮುದ್ದಿ, ಸೇರಿದಂತೆ ಹಲವರು ಈ ಒಂದು ಸಂದರ್ಭದಲ್ಲಿ ಉಪಸ್ಥಿತರಿದ್ದು ನೂತನ ಮುಖ್ಯಮಂತ್ರಿಗೆ ಅಭಿನನಂದನೆ ಸಲ್ಲಿಸಿ ಶುಭಾಶ ಯಗಳನ್ನು ಹೇಳಿದರು.