ಆರಂಭಗೊಂಡಿತು ಶಾಸಕ ಅಮೃತ ದೇಸಾಯಿ ಅವರ 6ನೇ ವರ್ಷದ ಪಾದಯಾತ್ರೆ – ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸೇರಿದಂತೆ ಮಠಾಧೀಶರಿಂದ ಪಾದಯಾತ್ರೆ ಗೆ ಚಾಲನೆ ಗರಗ ಮಠದಿಂದ ಹೊರಟಿತು ಯಾತ್ರೆ

Suddi Sante Desk
ಆರಂಭಗೊಂಡಿತು ಶಾಸಕ ಅಮೃತ ದೇಸಾಯಿ ಅವರ 6ನೇ ವರ್ಷದ ಪಾದಯಾತ್ರೆ – ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸೇರಿದಂತೆ ಮಠಾಧೀಶರಿಂದ ಪಾದಯಾತ್ರೆ ಗೆ ಚಾಲನೆ ಗರಗ ಮಠದಿಂದ ಹೊರಟಿತು ಯಾತ್ರೆ

ಧಾರವಾಡ

ಶಾಸಕ ಅಮೃತ ದೇಸಾಯಿ ಅವರ ಗರಗ ಮಡಿವಾಳೇಶ್ರ ಮಠದಿಂದ ಉಳವಿ ಚನ್ನಬಸ ವೇಶ್ವರ ಮಠದವರೆಗಿನ ಮತ್ತೊಂದು ಪಾದ ಯಾತ್ರೆ ಆರಂಭಗೊಂಡಿತು.6ನೇ ವರ್ಷದ ಈ ಒಂದು ಪಾದಯಾತ್ರೆ ಧಾರವಾಡದ ಗರಗ ಮಡಿವಾಳೇಶ್ವರ ಮಠದಿಂದ ಆರಂಭಗೊಂಡಿತು.

ಮಠದ ಮುಂದೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಮಠಾಧೀಶರ ಪಾದಪೂಜೆ ಪೂಜೆ ಪುನಸ್ಕಾರ ಸೇರಿದಂತೆ ಹಲವು ವಿಧಿ ವಿಧಾನಗಳ ನಂತರ ಸ್ವಾಮೀಜಿಗಳ ಆಶೀರ್ವಾದ ವನ್ನು ಪಡೆದುಕೊಂಡ ಶಾಸಕ ಅಮೃತ ದೇಸಾಯಿ ಮತ್ತು ಪ್ರೀಯಾ ಅಮೃತ ದೇಸಾಯಿ ಅವರು ತಮ್ಮ 6ನೇ ವರ್ಷದ ಪಾದಯಾತ್ರೆಯನ್ನು ಆರಂಭ ಮಾಡಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಮಠಾಧೀಶರು ಈ ಒಂದು 6ನೇ ವರ್ಷದ ಪಾದಯಾತ್ರೆಗೆ ಚಾಲನೆ ಯನ್ನು ನೀಡಿದರು.ಇಂದಿನಿಂದ ನಿರಂತರವಾಗಿ 6 ದಿನಗಳ ಕಾಲ ಈ ಒಂದು ಪಾದಯಾತ್ರೆ ನಿರಂತರ ವಾಗಿ ಉಳವಿ ವರೆಗೆ ಸಾಗಲಿದ್ದು ನವಂಬರ್ 28 ಕ್ಕೆ ಮುಕ್ತಾಯವಾಗಲಿದ್ದು ಶಾಸಕರೊಂದಿಗೆ ಅವರ ಪತ್ನಿ ಅಪಾರ ಬೆಂಬಲಿಗಳು ಕಾರ್ಯಕ ರ್ತರು ಅಭಿಮಾನಿಗಳು ಆಪ್ತರು ಸೇರಿದಂತೆ ಹಲವರು ಪಾದಯಾತ್ರೆಯಲ್ಲಿ ಹೆಜ್ದೆ ಹಾಕಲಿ ದ್ದಾರೆ.

ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.