ದೆಹಲಿ –
ಹುಬ್ಬಳ್ಳಿ ಧಾರವಾಡ ಪಶ್ಛಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರು ಕೇಂದ್ರ ಸಚಿವರಾದ ನಿತೀನ್ ಗಡ್ಕರಿ ಮತ್ತು ಪ್ರಹ್ಲಾದ್ ಜೋಶಿ ಅವರೊಂದಿಗೆ ಸಭೆಯ ನ್ನು ಮಾಡಿದರು.
ಹೌದು ದೆಹಲಿ ಯಲ್ಲಿ ಇಬ್ಬರು ಕೇಂದ್ರ ಸಚಿವರದೊಂದಿಗೆ ಮಹತ್ವದ ಸಭೆಯನ್ನು ಮಾಡಿದರ ಶಾಸಕ ಅರವಿಂದ ಬೆಲ್ಲದ ಅವರು ರಾಮನಗರ-ಅಳ್ನಾವರ ಮತ್ತು ಧಾರವಾಡ -ಹುಬ್ಬಳ್ಳಿಯ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸುವ ಕುರಿತಂತೆ ಚರ್ಚೆಯನ್ನು ಮಾಡಿದರು.
ಈ ಕುರಿತು ಈಗಾಗಲೇ ಶಾಸಕರು ಸಮಗ್ರವಾದ ಮಾಹಿತಿ ಯನ್ನು ಸಿದ್ದಮಾಡಿದ್ದು ಕೇಂದ್ರ ಸಚಿವರಾದ ಕೇಂದ್ರ ಸಂಸ ದೀಯ ವ್ಯವಹಾರಗಳು ಕಲ್ಲಿದ್ದಲು ಹಾಗೂ ಗಣಿಗಾರಿಕೆ ಖಾತೆ ಸಚಿವರಾದ ಪ್ರಲ್ಹಾದ್ ಜೋಶಿ ಅವರ ಉಪಸ್ಥಿತಿ ಯಲ್ಲಿ ನೀಡಿ ಸಮಗ್ರವಾಗಿ ಚರ್ಚೆಯನ್ನು ಮಾಡಿ ಮಾತು ಕತೆ ಮಾಡಿದರು.ಇದರೊಂದಿಗೆ ಇನ್ನೂ ಜಿಲ್ಲೆಯ ಹಲವು ಯೋಜನೆಗಳ ಕುರಿತಂತೆ ಚರ್ಚೆಯನ್ನು ಮಾಡಿ ಅನುದಾ ನಕ್ಕಾಗಿ ಒತ್ತಾಯವನ್ನು ಮಾಡಿದರು.
ಮಂಜುನಾಥ ಸರ್ವಿ ಸುದ್ದಿ ಸಂತೆ ನ್ಯೂಸ್ ದೆಹಲಿ