ಮಂಡ್ಯ –
ಕೆಲ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಿನ್ನೇ ಯಷ್ಟೇ ಧಾರವಾಡದಲ್ಲಿ ಖಾಸಗಿ ಶಾಲಾ ಶಿಕ್ಷಕರು ಪ್ರತಿಭಟನೆ ಮಾಡಿದ್ದರು.ಇನ್ನೂ ಕೆಲ ಶಿಕ್ಷಕರು ಅಪರ ಆಯುಕ್ತರ ಕಾಲಿಗೆ ಬಿದ್ದು ಬೇಡಿಕೆ ಈಡೇರಿಸಲು ಒತ್ತಾಯ ಮಾಡಿದ್ದರು.ಇದರ ಬೆನ್ನಲ್ಲೇ ಇತ್ತ ಮತ್ತೋರ್ವ ಉಪನ್ಯಾಸಕರೊಬ್ಬರು ಶಾಸಕರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ.ಹೌದು ಇಂಥದೊಂದು ಘಟನೆ ಮಂಡ್ಯ ದಲ್ಲಿ ನಡೆದಿದೆ ಪ್ರಾಂಶುಪಾಲರ ಉಪಟಳ ಸಹಿಸಲಾರದೆ ತಮ್ಮನ್ನು ಪಾರು ಮಾಡಿ ಎಂದು ಉಪನ್ಯಾಸಕರೊಬ್ಬರು ಶಾಸಕರ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾರೆ.ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ
ಇಲ್ಲಿನ ಉಪನ್ಯಾಸಕ ವಿ.ಕೆ. ಶಿವಾನಂದ ಎಂಬು ವರು ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ ಅವರ ಕಾಲಿಗೆ ಬಿದ್ದಿದ್ದಾರೆ.ಶಾಸಕರು ಕಾಲೇಜಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಇಂಥದ್ದೊಂದು ಘಟನೆ ನಡೆದಿದೆ.ಕಾಲೇಜಿನ ಪ್ರಾಂಶುಪಾಲ ಪಾಪಯ್ಯ ಅವರು ಜಾತೀಯತೆ ತೋರುತ್ತಿದ್ದಾರೆ.ಚಿಕ್ಕಪುಟ್ಟ ವಿಷಯಗಳಿಗೂ ಅಟ್ರಾಸಿಟಿ ಕೇಸು ದಾಖಲಿಸು ತ್ತಿದ್ದಾರೆ. ನಾವು ಪೊಲೀಸ್ ಠಾಣೆಗೆ ಅಲೆದು ಸುಸ್ತಾಗಿದ್ದೇವೆ ದಯಮಾಡಿ ಇದರಿಂದ ನಮ್ಮನ್ನು ಹೇಗಾದರೂ ಪಾರು ಮಾಡಿ ಎಂದು ಶಾಸಕರ ಕಾಲಿಗೆ ಬಿದ್ದು ಉಪನ್ಯಾಸಕರು ಬೇಡಿಕೊಂಡಿದ್ದಾರೆ.
ಉಪನ್ಯಾಸಕರನ್ನು ಸಂತೈಸಿದ ಶಾಸಕ ಡಿ.ಸಿ. ತಮ್ಮಣ್ಣ ಶಿಕ್ಷಣಕ್ಕೆ ತೊಂದರೆ ಕೊಡುವವರನ್ನು ಹೊರಗೆ ಹಾಕುತ್ತೇನೆ.ಅವರಿಂದ ನನಗೇನೂ ಲಕ್ಷಾಂತರ ವೋಟು ಬರಬೇಕಾಗಿಲ್ಲ.ನನಗೆ ಅಧಿಕಾರ ಮುಖ್ಯವಲ್ಲ ಸಂಸ್ಥೆಗೆ ತೊಂದರೆ ಕೊಡುವವರನ್ನು ಹೊರಗೆ ಕಳುಹಿಸುತ್ತೇನೆ ಎಂದರು.ಅಲ್ಲದೆ ಸಮಸ್ಯೆ ಸರಿಯಾಗಿ ಹೇಳಬೇಕಲ್ವಾ ಎನ್ನುತ್ತಾ ಆ ಒಂದು ಉಪನ್ಯಾಸಕರಿಗೆ ಶಾಸಕರು ಸಾಂತ್ವನ ಹೇಳಿದರು.