ಬೆಂಗಳೂರು-
ನಾಡದೊರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಭೇಟಿಯಾದರು.

ಬೆಂಗಳೂರಿನ ಗೃಹ ಕಚೇರಿ ಕಾವೇರಿಗೆ ತೆರಳಿದ ಶಾಸಕ ಅಮೃತ ಭೇಟಿಯಾಗಿ ಮೊದಲು ಧಾರವಾಡ ತಾಲ್ಲೂಕಿನ ಮೂರು ದೇವಸ್ಥಾನಗಳಿಗೆ ಧಾರ್ಮಿಕ ಮತ್ತು ದತ್ತಿ ಇಲಾಖೆಯಿಂದ ವಿಶೇಷ ಅನುದಾನ ವನ್ನು ನೀಡಿದಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.

ತಾಲ್ಲೂಕಿನ ಮೂರು ಐತಿಹಾಸಿಕ ದೇವಸ್ಥಾನಗಳ ಜೀರ್ಣೊದ್ದಾರಕ್ಕೆ ವಿಶೇಷ ಅನುದಾನವನ್ನು ನೀಡಿದ್ದು ಇದಕ್ಕಾಗಿ ಕ್ಷೇತ್ರದ ಜನತೆಯ ಪರವಾಗಿ ವಯಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

ಇದೇ ವೇಳೆ ಕೆಲ ಕಾಲ ಎಲ್ಲಾ ಶಾಸಕರೊಂದಿಗೆ ಜೊತೆಯಾಗಿ ಕೆಲ ವಿಚಾರಗಳ ಕುರಿತಂತೆ ಮಾತುಕತೆ ಮಾಡಿದರು. ಈ ಒಂದು ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೆಎಮ್ಎಫ್ ನಿರ್ದೇ ಶಕರಾದ ಶಂಕರ ಮುಗದ, ಸೇರಿದಂತೆ ಹಲವರು ಉಪಸ್ಥಿತರಿದ್ದರು