ಬ್ಯಾಹಟ್ಟಿ –
ಬ್ಯಾಹಟ್ಟಿ ಗ್ರಾಮದ ಆಶ್ರಯ ಬಡಾವಣೆಗೆ ಬೆಳಕಾದ ಶಾಸಕ ಎನ್ ಹೆಚ್ ಕೊನರಡ್ಡಿ ಸಮಸ್ಯೆ ಗಮನಕ್ಕೆ ಬಂದು ಎರಡು ತಿಂಗಳಲ್ಲಿ ಬಡಾವಣೆಗೆ ವಿದ್ಯುತ್ ಸೌಲಭ್ಯ ಕಲ್ಪಿಸಿದ ಶಾಸಕರು ಚಾಲನೆ ನೀಡಿ ಜನರ ಮೆಚ್ಚುಗೆ ಪಾತ್ರರಾದ ಶಾಸಕರ ಧರ್ಮಪತ್ನಿ
ಹೌದು ಸಾಮಾನ್ಯವಾಗಿ ಯಾವುದೇ ಒಂದು ಸಮಸ್ಯೆಯನ್ನು ಒತ್ತುಕೊಂಡು ಗಮನಕ್ಕೆ ತಗೆದು ಕೊಂಡು ಬಂದರು ಜನಪ್ರತಿನಿಧಿಗಳು ಸ್ಪಂದಿ ಸೊದು ತುಂಬಾ ಅಪರೂಪ. ನೋಡಿದಾ ರಾಯಿತು ಬಿಡಿ ಮಾಡೋಣಾ ಎಂದುಕೊಂಡು ಸುಮ್ಮನರಾಗುತ್ತಾರೆ ಹೀಗಿರುವಾಗ ಸಮಸ್ಯೆ ಯೊಂದು ಗಮನಕ್ಕೆ ಬಂದು ಎರಡೇ ತಿಂಗಳಲ್ಲಿ ಅದನ್ನು ಪರಿಹಾರ ಮಾಡಿ ಸಧ್ಯ ಚಾಲನೆ ಕೂಡಾ ನೀಡಿದ್ದಾರೆ.
ಹೌದು ಇದಕ್ಕೆ ಈ ಒಂದು ಮಾತಿಗೆ ಸಾಕ್ಷಿ ನವಲಗುಂದ ಕ್ಷೇತ್ರದ ಶಾಸಕ ಎನ್ ಹೆಚ್ ಕೋನರಡ್ಡಿ.ಕ್ಷೇತ್ರದ ಬ್ಯಾಹಟ್ಟಿ ಗ್ರಾಮದ ಆಶ್ರಯ ಬಡಾವಣೆಯಲ್ಲಿ ಬಹಳ ದಿನಗಳಿಂದ ವಿದ್ಯುತ್ ಹಾಗೇ ಮೂಲಭೂತ ಸೌಲಭ್ಯಗಳಿಲ್ಲ ಕುರಿತಂತೆ ಬಡಾವಣೆಯ ನಿವಾಸಿಗಳು ಶಾಸಕರ ಗಮನಕ್ಕೆ ತಗೆದುಕೊಂಡು ಬಂದಿದ್ದರು.
ಈ ಕುರಿತಂತೆ ಸ್ವತಃ ಶಾಸಕ ಎನ್ ಹೆಚ್ ಕೊನರಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆ ಆಲಿಸಿದ್ದರು ಜನತೆ ಬಹಳ ವರುಷಗಳಿಂದ ವಿದ್ಯುತ್ ಹಾಗೂ ಮೂಲಭೂತ ಸೌಕರ್ಯಗ ಳಿಲ್ಲದೆ ಪರದಾಡುತ್ತಿದ್ದು
ಈ ವಿಷಯವು ಗಮನಕ್ಕೆ ಬಂದ ಕೇವಲ 2 ತಿಂಗಳಲ್ಲಿ ಮೊದಲಿಗೆ ತಾತ್ಪುರಿಕವಾಗಿ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಲು ಹನಸಿ ದಾರಿ ಗುಡಿಯವರ ಹೊಲದಲ್ಲಿರುವಂತಹ ಆಶ್ರಯ ಬಡಾವಣೆಗೆ 2 ಹೈಮಾಸ್ಕ್ ಲೈಟುಗಳನ್ನು ಒದಗಿಸಿ ದ್ದಾರೆ.
ಶಾಸಕರ ಧರ್ಮಪತ್ನಿ ಪ್ರೇಮ ಕೋನರಡ್ಡಿ ಅವರು ಅದಕ್ಕೆ ಚಾಲನೆ ನೀಡಿದರು.ಈ ಸಂಧರ್ಭದಲ್ಲಿ ಬ್ಯಾಹಟ್ಟಿ ಗ್ರಾಮದ ಹಿರಿಯ ಮುಖಂಡರಾದ ಈರಣಗೌಡ ಮರಿಗೌಡರ ಹಾಗೂ ಬ್ಯಾಹಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿರುವ ಶ್ರೀಮತಿ ಮಹಾದೇವಿ ಹಂಗರಕಿ, ಮತ್ತು ಅಶೋಕ ಸ್ವಾಧಿ, ಅಜಿತ ತಿರ್ಲಾಪೂರ
ಸೋಮು ಬೆಂಗೆರಿ, ಶಿವು ಕಿರೆಸುರ, ಬಸವನಗೌಡ ದ್ಯಾವನಗೌಡರ, ಸಮೀರ್ ಪೀರಖಾನ, ಬ್ಯಾಹಟ್ಟಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಮುಖಂಡರು ಹಾಗೂ ಯುವಕ ಮಿತ್ರರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬ್ಯಾಹಟ್ಟಿ…..