ಬೆಂಗಳೂರು –
ರಾಜ್ಯದಲ್ಲಿನ ಬರಗಾಲ ಪೀಡಿತ ತಾಲ್ಲೂಕು ಗಳನ್ನು ಈಗಾಗಲೇ ಪಟ್ಟಿ ಮಾಡಿ ಘೋಷಣೆ ಮಾಡಿದೆ.ಈ ನಡುವೆ ಧಾರವಾಡ ಜಿಲ್ಲೆಯ ಐದು ತಾಲ್ಲೂಕು ಗಳು ಪಟ್ಟಿ ಯಲ್ಲಿ ಘೋಷಣೆ ಯಾಗಿದ್ದು ಈ ನಡುವೆ ನವಲಗುಂದ ವಿಧಾನ ಸಭಾ ಕ್ಷೇತ್ರದ ಹುಬ್ಬಳ್ಳಿ ಗ್ರಾಮೀಣ ಮತ್ತು ನವಲಗುಂದ ತಾಲ್ಲೂಕು ನ್ನು ಘೋಷಣೆ ಮಾಡಿದ್ದು
ಈ ಒಂದು ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರಿಗೆ ಶಾಸಕ ಎನ್ ಹೆಚ್ ಕೋನರೆಡ್ಡಿ ಯವರು ಅಭಿನಂದನೆಗಳನ್ನು ಸಲ್ಲಿಸಿದರು ಇದೇ ವೇಳೆ ಕ್ಷೇತ್ರದ ಅಣ್ಣಿಗೇರಿ ಪ್ರದೇಶ ವನ್ನು ಕೈಬಿಟ್ಟಿದ್ದು ಇದಕ್ಕಾಗಿ ಮನವಿ ಯನ್ನು ಮಾಡಿದರು. ಹೌದು
ರಾಜ್ಯ ಸರ್ಕಾರದಿಂದ ಬರಗಾಲ ಪೀಡಿತ ಪ್ರದೇಶ ಗಳ ಪಟ್ಟಿಯಲ್ಲಿ ಮತ ಕ್ಷೇತ್ರದ ನವಲಗುಂದ ಹಾಗೂ ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕುಗಳನ್ನು ಘೋಷಿಸಿದ್ದು ಅದರಲ್ಲಿ ಅಣ್ಣಿಗೇರಿ ತಾಲ್ಲೂಕನ್ನು ಕೈ ಬಿಡಲಾಗಿದೆ.ಹೀಗಾಗಿ ಬೆಂಗಳೂರಿನ ಮುಖ್ಯ ಮಂತ್ರಿಗಳ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಹಾಗೂ ಕೃಷಿ ಸಚಿವ ಎನ್. ಚೆಲುವನಾರಾಯಣಸ್ವಾಮಿ ಅವರನ್ನು ಭೇಟಿ ಮಾಡಿದರು
ಇದೇ ವೇಳೆ ಅಣ್ಣಿಗೇರಿ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಲು ಅಣ್ಣಿಗೇರಿ ತಾಲ್ಲೂಕಿನ ಸಾರ್ವಜನಿಕರ ಪರವಾಗಿ ಮನವಿ ಸಲ್ಲಿಸಲಾಯಿತು.ಇದರೊಂದಿಗೆ ಕ್ಷೇತ್ರದ ಸಮಸ್ಯೆ ಕುರಿತು ತುರ್ತಾಗಿ ಸ್ಪಂದಿಸಿ ಧ್ವನಿ ಎತ್ತಿದರು ಜನ ನಾಯಕ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..