ನವಲಗುಂದ –
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ನವಲಗುಂದ ವಿಧಾನಸಭಾ ಮತಕ್ಷೇತ್ರದ ಅಣ್ಣಿಗೇರಿ ತಾಲೂಕ ಶ್ರೀಕ್ಷೇತ್ರ ಮಣಕವಾಡ ಗ್ರಾಮದ ಶ್ರೀ ಗುರು ಅನ್ನದಾನೀಶ್ವರ ದೇವ. ಮಂದಿರ ಮಹಾಮಠದ ಮಹಾತಪಸ್ವಿಗಳಾದ ನಿರಂಜನಜ್ಯೋತಿ ಲಿಂ. ಮೃತ್ಯುಂಜಯ ಅಜ್ಜನ ಸಂಭ್ರಮ 2024ರ ಉದ್ಘಾಟನಾ ಅನ್ನದಾನೀಶ್ವರ ದೇವಮಂದಿರ ಮಹಾಮಠ ಮನಕವಾಡ ಪೂಜ್ಯ ಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳ ಸಮಾರಂಭದಲ್ಲಿ ಭಾಗವಹಿಸಿ ಪೂಜ್ಯರ ಆಶೀರ್ವಾದ ವನ್ನು ಶಾಸಕ ಎನ್ ಹೆಚ್ ಕೋನರೆಡ್ಡಿ ರವರು ಪಡೆದುಕೊಂಡರು
ರಾಜ್ಯದ ಜನಪ್ರಿಯ ಮುಖ್ಯ ಮಂತ್ರಿಗಳು ಸಿದ್ಧರಾಮಯ್ಯ ಅವರು ಬಸವಣ್ಣವರವನ್ನು ಈ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿ ಸಿದ ಪ್ರಯುಕ್ತವಾಗಿ ಈ ಬಾರಿ ಜಾತ್ರಾ ವಿಶೇಷ ಕಾರ್ಯಕ್ರಮವನ್ನು ಮಠದ ಶ್ರೀಗಳು ಮಠದ ಆವರಣದಿಂದ ಸಾಗಿತು
ಭಕ್ತರ ತಲೆಯ ಮೇಲೆ ಪೂಜ್ಯರ ಪುತ್ಥಳಿಗಳನ್ನು ಇರಿಸಿ ಹಾಗೂ ಸಾವಿರಾರು ತಾಯಂದಿರಿಂದ ಅವರ ತಲೆ ಮೇಲೆ ವಚನದ ಪುಸ್ತಕವನ್ನು ಇರಿಸಿ ಕೊಂಡು ಮಠದ ಶಾಲಾ ಆವರಣದವರೆಗೆ ಮೆರವಣಿಗೆ ಮೂಲಕ ನಡೆದುಕೊಂಡು ಹೋಗಿ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು
ನವಲಗುಂದ ವಿಧಾನಸಭಾ ಮತಕ್ಷೇತ್ರ-69 ರಲ್ಲಿ ನ ಈ ಒಂದು ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮ ವಿಶೇಷವಾಗಿ ಕಂಡು ಬಂದಿತು…..
ಸುದ್ದಿ ಸಂತೆ ನ್ಯೂಸ್ ನವಲಗುಂದ…..