ಹೌದು ರಾಜ್ಯದ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕೂಡಾ ಒಂದಾಗಿದ್ದು ಈ ಒಂದು ವಿವಿ ಯ ಆರ್ಥಿಕ ಪರಿಸ್ಥಿತಿಯನ್ನು ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ವಿಧಾನ ಸಭೆಯಲ್ಲಿ ಏಳೆ ಏಳೆಯಾಗಿ ಬಿಚ್ಚಿಟ್ಟರು ಹೌದು ಇದಕ್ಕೂ ಮುನ್ನ ವಿಸ್ತಾರವಾಗಿ ವಿವರಿಸಲು ಸಮಯ ಕೋರಿ ಶೂನ್ಯ ವೇಳೆಯಲ್ಲಿ ಸದನ ಗಮನಕ್ಕೆ ಕವಿವಿ ಯ ಹಣಕಾಸಿನ ಸಮಸ್ಯೆಯನ್ನು ವಿವರಿಸಿದದರು.ವಿವಿ ಯ ಚಿತ್ರಣ ಪರಸ್ಥಿತಿಯನ್ನು ವಿವರಿಸುತ್ತಿದ್ದಂತೆ ಮುಖ್ಯಮಂತ್ರಿಗಳು ಕವಿವಿಗೆ ಬರುವ ಅನುದಾನವನ್ನು ಆದಷ್ಟು ಬೇಗ ಬಿಡುಗಡೆ ಮಾಡಿ ಕೊಡುತ್ತೇನೆ ಎಂದು ಸದನಕ್ಕೆ ತಿಳಿಸಿದರು.ಇನ್ನೂ ಸಾಕಷ್ಟು ಸಮಸ್ಯೆಗಳನ್ನು ಹೇಳೋದಕ್ಕೆ ಅವಕಾಶವನ್ನು ಇವರಿಗೆ ಕೊಡಬೇಕಿತ್ತು ಅಲ್ಲದೇ ವಿಶ್ವವಿದ್ಯಾಲಯದ ಆರ್ಥಿಕ ಸಂಕಷ್ಟಕ್ಕೆ ಅಗತ್ಯಕ್ಕಿಂತ ಹೆಚ್ಚಿಗೆ ಉಪನ್ಯಾಸಕರ ನೇಮಕ ಮಾಡಿಕೊಂಡಿದ್ದೇ ಕಾರಣ ಎಂಬಂತೆ ಬಿಂಭಿಸಲಾಗ್ತಿದೆ.ಅದಕ್ಕಾಗಿ,ಹೆಚ್ಚುವರಿ ನೇಮಕ ಅಂದ್ರೆ ಎಷ್ಟು?ಯಾವಾಗ?ಏಕೆ?ಹೇಗೆ?ಎಂಬೆಲ್ಲಾ ಪ್ರಶ್ನೆಗಳಿಗೆ ಕುಲಪತಿಗಳ ಮತ್ತು ಸಂಬಂಧಪಟ್ಟ ಸಚಿವರು ಉತ್ತರ ಕೊಡಬೇಕಾಗುತ್ತೆ.ಜೊತೆಗೆ ಅದಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ.ಹೀಗಾಗಿ ವಿಶ್ವವಿದ್ಯಾಲಯದ ಆರ್ಥಿಕ ದುಸ್ಥಿತಿಯ ಕುರಿತು ಸಮಗ್ರ ತನಿಖೆ ನಡೆಸಬೇಕು. ಸರಕಾರ ತಾನು ಕೊಡಬೇಕಿರುವ ಅನುದಾನವನ್ನು ಕೊಡದೇ ಮುಖ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ.ಕಳೆದ 2 ವರ್ಷಗಳಿಂದ ಕೇಂದ್ರ ರಾಜ್ಯ ಸರ್ಕಾರ ಗಳಾಗಲಿ ಒಂದು ಬಿಡಿಗಾಸು ಸಹಾಯಧನ ಕೊಟ್ಟಿಲ್ಲ.ಅಂದರೆ ವಿವಿಗಳಿಗೆ ನೋಪೇಮೆಂಟ್ ಎಜುಕೇಷನ್ ಪಾಲಿಸಿ ಯೆ ಇದನ್ನೇ ಡಬಲ್ ಎಂಜಿನ್ ಸರ್ಕಾರ ಏನ್ನುವರೆ ಎಂದು ವಿವಿಯ ಮಾಜಿ ಸಿಂಡಿಕೇಟ್ ಸದಸ್ಯರಾಗಿರುವ ರವಿ ಮಾಳಿಗೇರ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶ್ನೆ ಮಾಡಿದ್ದಾರೆ.
Suddi Sante > State News > ಸದನದಲ್ಲಿ ಧಾರವಾಡದ ವಿವಿ ಆರ್ಥಿಕ ಪರಸ್ಥಿತಿಯನ್ನು ಬಿಚ್ಚಿಟ್ಟ ಶಾಸಕ ಪ್ರಸಾದ ಅಬ್ಬಯ್ಯ – ಶಾಸಕರ ಧ್ವನಿಗೆ ಸ್ಪಂದಿಸದ ಸರ್ಕಾರ
ಸದನದಲ್ಲಿ ಧಾರವಾಡದ ವಿವಿ ಆರ್ಥಿಕ ಪರಸ್ಥಿತಿಯನ್ನು ಬಿಚ್ಚಿಟ್ಟ ಶಾಸಕ ಪ್ರಸಾದ ಅಬ್ಬಯ್ಯ – ಶಾಸಕರ ಧ್ವನಿಗೆ ಸ್ಪಂದಿಸದ ಸರ್ಕಾರ
Suddi Sante Desk23/09/2022
posted on
