ಹುಬ್ಬಳ್ಳಿ –
ಪಾಲಿಕೆಯ ಆಯುಕ್ತರೊಂದಿಗೆ ಸಭೆ ಮಾಡಿದ ಶಾಸಕ ಪ್ರಸಾದ ಅಬ್ಬಯ್ಯ – ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ಸ್ಪಂದಿಸಿ ಪಾಲಿಕೆಯ ಅಧಿಕಾರಿ ಗಳೊಂದಿಗೆ ಸಭೆ ಮಾಡಿ ಚರ್ಟೆ ಮಾಡಿದ ಶಾಸಕರು
ಯಾವುದೇ ಸಮಸ್ಯೆ ಯಾವುದೇ ವಿಚಾರ ಗಮನಕ್ಕೆ ಬರುತ್ತಿದ್ತಂತೆ ತಕ್ಷಣ ಸ್ಪಂದಿಸಿ ಪರಿಹಾರ ಕಲ್ಪಿಸುವುದೇ ನಿಜವಾದ ಕಾರ್ಯ.ಹೌದು ಈ ಒಂದು ಕಾರ್ಯವನ್ನು ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಮಾಡಿದ್ದಾರೆ.ತಮ್ಮ ಕ್ಷೇತ್ರದಲ್ಲಿನ ಮತ್ತು ಹುಬ್ಭಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಘನತ್ಯಾಜ್ಯ ವಿಲೇವಾರಿ ವಿಭಾಗ ದಲ್ಲಿ ಆಟೋ ಟಿಪ್ಪರ್ ಚಾಲನೆ ಮಾಡುತ್ತಿರುವ ಚಾಲಕರ ಸಮಸ್ಯೆ ಕುರಿತಂತೆ ಸಭೆ ಮಾಡಿದರು
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಲ್ಲಿನ ಘನತ್ಯಾಜ್ಯ ವಿಲೇವಾರಿ ವಿಭಾಗದಲ್ಲಿ ಅಟೋಟಿಪ್ಪರ್ ಚಾಲಕರ ಸಮರ್ಪಕ ವೇತನ ಪಾವತಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತಂತೆ ಶಾಸಕ ಪ್ರಸಾದ ಅಬ್ಬಯ್ಯ ಅವರು ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಸಭೆ ಮಾಡಿದರು
ಆಯುಕ್ತರೊಂದಿಗೆ ನಡೆಸಿದ ಅವರು ಅಗತ್ಯ ಸೂಚನೆಗಳನ್ನು ಆಯುಕ್ತರಿಗೆ ಅಧಿಕಾರಿಗಳಿಗೆ ನೀಡಿದರು.ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ರಾದ ಈಶ್ವರ ಉಳ್ಳಾಗಡ್ಡಿ, ಮುಖ್ಯಲೆಕ್ಕಾಧಿಕಾರಿ ವಿಶ್ವನಾಥ್,ಪಾಲಿಕೆ ಸದಸ್ಯರಾದ ಶ್ರೀನಿವಾಸ ಬೆಳದಡಿ,ಪಾಲಿಕೆ ಮಾಜಿ ಸದಸ್ಯರಾದ ಶಿವಾನಂದ ಮುತ್ತಣ್ಣವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..