ಹುಬ್ಬಳ್ಳಿ –
ನಿದ್ರಾವಸ್ಥೆಯಲ್ಲಿದೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ – ಪ್ರಸಾದ ಅಬ್ಬಯ್ಯನವರೇ ನಿಮ್ಮ ಕ್ಷೇತ್ರದಲ್ಲಿ ಪಾಲಿಕೆಯ ಕಾರ್ಯವೈಖರಿ ಹೇಗಿದೆ ಒಮ್ಮೆ ನೋಡಿ…..ಹಿಡಿಶಾಪ ಹಾಕುತ್ತಿ ದ್ದಾರೆ ಪಾಲಿಕೆಯ ಆಡಳಿತ ವ್ಯವಸ್ಥೆಗೆ ಹೌದು
ಕೆಲವೊಮ್ಮೆ ಆಡಳಿತ ವ್ಯವಸ್ಥೆ ಅಧಿಕಾರಿಗಳು ಕಂಡು ಕಾಣದಂತೆ ಇರುತ್ತಾರೆ ಎಂಬೊದಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಾಕ್ಷಿ.ಹೌದು ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ ಮುಂದಿನ ಸರ್ಕಲ್ ನಲ್ಲಿ ಮುಖ್ಯ ರಸ್ಥೆಯಲ್ಲಿ ಒಂದು ಸಣ್ಣ ತೆಗ್ಗು ಬಿದ್ದು ಮೂರು ನಾಲ್ಕು ತಿಂಗಳು ಕಳೆದಿವೆ ಮುಖ್ಯ ರಸ್ಥೆ ಒಂದು ಕಡೆ ಇನ್ನೊಂದು ಕಡೆಗೆ ಸರ್ಕಲ್ ಹೀಗಿರುವಾಗ ತೆಗ್ಗು ಬಿದ್ದಿರುವ ರಸ್ತೆಯನ್ನು ಸುಧಾರಣೆ ಮಾಡುವ ಬದಲಿಗೆ ಕಂಡು ಕಾಣದಂತೆ ಮಹಾನಗರ ಪಾಲಿಕೆಯ ಅಧಿಕಾರಿಗಳಿದ್ದಾರೆ.
ಈ ಕುರಿತಂತೆ ಸಾರ್ವಜನಿಕರು ಪಾಲಿಕೆಗೆ ಸಾಕಷ್ಟು ಬಾರಿ ದೂರನ್ನು ನೀಡಿದರು ಕೂಡಾ ಪಾಲಿಕೆಯ ಆಯುಕ್ತರ ಗಮನಕ್ಕೆ ತಗೆದುಕೊಂಡು ಬಂದರು ಕೂಡಾ ಕೇಳಿ ಕೇಳಲಾರದಂತೆ ಕಂಡು ಕಾಣದಂತೆ ಮೌನವಾಗಿದ್ದಾರೆ.ಮ್ಯಾನ್ ವೊಲ್ ಮೇಲಿನ ಕ್ಯಾಪ್ ಹಾಳಾಗಿದ್ದು ತೆಗ್ಗು ಬಿದ್ದಿದ್ದು ಬೈಕ್ ಸವಾರರು ಹೋಗುವಾಗ ಇಲ್ಲವೇ ಬರು ವಾಗ ಟರ್ನ್ ತಗೆದುಕೊಳ್ಳುವಾಗ ತೆಗ್ಗಿನಲ್ಲಿ ಬೀಳುತ್ತಾರೆ
ಹೀಗಿರುವಾಗ ಸಮಸ್ಯೆಯನ್ನು ಸರಿ ಮಾಡಬೇ ಕಾದ ಪಾಲಿಕೆಯ ಅಧಿಕಾರಿಗಳು ಒಮ್ಮೆ ನೋಡಿ ಇನ್ನೂ ಶಾಸಕ ಪ್ರಸಾದ ಅಬ್ಬಯ್ಯನವರೇ ಮಹಾ ನಗರ ಪಾಲಿಕೆಯ ಅಧಿಕಾರಿಗಳ ಕೆಲಸ ಕಾರ್ಯ ವೈಖರಿ ಹೇಗಿದೆ ಒಮ್ಮೆ ನೋಡಿ ತೆಗ್ಗಿಗೆ ಬಲಿ ಯಾಗುವ ಮುನ್ನವೇ ಇನ್ನಾದರೂ ಈ ಒಂದು ಸಣ್ಣ ಸಮಸ್ಯೆಯನ್ನು ಕಣ್ತೇರೆದು ನೋಡಿ
ಪಾಲಿಕೆಯ ಅಧಿಕಾರಿಗಳು ಸರಿ ಮಾಡಬೇಕಿದೆ ಇಲ್ಲವಾದರೆ ಮಳೆಯಲ್ಲಿ ಹೋಗುವ ಸಮಯ ದಲ್ಲಿ ತೆಗ್ಗಿಗೆ ಬೈಕ್ ಸವಾರರು ಬೀಳೊದು ಗ್ಯಾರಂಟಿ.ಇನ್ನಾದರೂ ಈ ಕೂಡಲೇ ಸಮಸ್ಯೆಗೆ ಪಾಲಿಕೆಯ ಅಧಿಕಾರಿಗಳು ಸ್ಪಂದಿಸುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.ಅದರಲ್ಲೂ ಖಡಕ್ ಅಧಿಕಾರಿ ಎಂದೇ ಹೆಸರಾಗಿರುವ ಆಯುಕ್ತರು ಈ ಒಂದು ಸಮಸ್ಯೆ ಗೆ ಮುಕ್ತಿ ನೀಡತಾರಾ ಎಂಬುದನ್ನೂ ಕಾದು ನೋಡಬೇಕಿದೆ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..