ಬಸ್ ಓಡಿಸಿ ವಿಶೇಷವಾಗಿ ಚಾಲನೆ ನೀಡಿದ ಶಾಸಕ ರೇಣುಕಾಚಾರ್ಯ ತಾವೇ ಬಸ್ ಚಾಲನೆ ಮಾಡಿ ಮತ್ತೊಮ್ಮೆ ಸುದ್ದಿಯಾದ್ರು ರೇಣುಕಾಚಾರ್ಯ…..

Suddi Sante Desk

ದಾವಣಗೆರೆ –

ಸಾಮಾನ್ಯವಾಗಿ ರಿಬ್ಬನ್ ಕತ್ತರಿಸಿ ಇಲ್ಲವೇ ಹಸಿರು ನಿಶಾನೆ ತೋರಿಸಿ ಇಲ್ಲವೇ ಪೂಜೆ ಮಾಡಿ ಬಸ್ ಗೆ ಚಾಲನೆ ಚಾಲನೆ ಮಾಡೊದನ್ನು ಕೊಡುವುದನ್ನು ನೋಡಿದ್ದೇವೆ ಕೇಳಿದ್ದೇವೆ ಆದರೆ ಹೊನ್ನಾಳಿಯ ಶಾಸಕ ರೇಣುಕಾಚಾರ್ಯ ಅವರು ಬಸ್ ಗೆ ವಿಶೇಷವಾಗಿ ಚಾಲನೆ ನೀಡಿದ್ದಾರೆ.ಹೌದು ಈ ಹಿಂದೆ ಬಸ್ ಗೆ ಚಾಲನೆ ನೀಡುವ ಸಮಯದಲ್ಲಿ ತಾವೇ ಸ್ವತಃ ಬಸ್ ಚಾಲನೆ ಮಾಡಿ ಸುದ್ದಿಯಾಗಿದ್ದ ಇವರು ಈಗ ತಾವೇ ಮತ್ತೊಮ್ಮೆ ಬಸ್ ನ್ನು ಓಡಿಸಿ ಚಾಲನೆ ನೀಡಿದರು.

ಹೊನ್ನಾಳಿ ತಾಲ್ಲೂಕಿನ ಹೊಸಹಳ್ಳಿ, ಹುರಳೆಹಳ್ಳಿ, ಬಾಗವಾಡಿ,ಲಿಂಗಾಪುರ, ಹನಗವಾಡಿ, ಚನ್ನಾಪುರ, ಹುಣಸಘಟ್ಟ, ಕ್ಯಾಸಿನಕೆರೆ, ಕುಳಗಟ್ಟೆ, ಸಾಸ್ವೆಹಳ್ಳಿ, ಕಮ್ಮಾರಗಟ್ಟೆ ತಾಂಡಾ, ಘಂಟಾಪುರ, ತರಗನಹಳ್ಳಿ ಹಾಗೂ ಮಾಸಡಿ ಗ್ರಾಮಕ್ಕೆ ನೂತನ ಬಸ್ ಬಿಡುಗಡೆ ಮಾಡಲಾಯಿತು.

ಈ ವೇಳೆ ಶಾಸಕ ರೇಣುಕಾಚಾರ್ಯ ಬಸ್ ಚಾಲನೆ ಮಾಡಿದರು.ಹೊಸ ಬಸ್ ಏರಿದ ಅವರು ತಾವೇ ಸ್ವತಃ ಬಸ್ ಚಾಲನೆ ಮಾಡುವ ಮೂಲಕ ಗಮನ ಸೆಳೆದರು. ಇನ್ನೂ ಸರ್ಕಾರಿ ಕೆಲಸಕ್ಕೆ ಅಡ್ಡಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ ಹೊಸಹಳ್ಳಿ ಗ್ರಾಮದಿಂದ ಚಾಲನೆ ನೀಡುವ ವೇಳೆ ಚಾಲಕರ ಬದಲಿಗೆ ಬಸ್ ಚಾಲನೆ ಮಾಡಿದರು.

ರೇಣುಕಾಚಾರ್ಯ ಈ ಹಿಂದೆ ಕೂಡ ಬಸ್ ಚಾಲನೆ ಮಾಡಿದ್ದ ರೇಣುಕಾಚಾರ್ಯ ತೀವ್ರ ವಿವಾದಕ್ಕೀಡಾಗಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.