ಬೆಂಗಳೂರು –
ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ವಿನಯ ಕುಲಕರ್ಣಿ ಅವರ ಮಗನ ಬೈಕ್ ಅಪಘಾತವಾಗಿದೆ ಹೌದು ಬೆಂಗಳೂರಿನ ಬೆಳ್ಳಂದೂರು ಸಂಚಾರ ಠಾಣೆ ವ್ಯಾಪ್ತಿಯಲ್ಲಿರುವ ಹೊರವರ್ತುಲ ರಸ್ತೆಯಲ್ಲಿ ಈ ಒಂದು ಅಪಘಾತ ಸಂಭವಿಸಿದೆ
ಅಪಘಾತ ಸಂಭವಿಸಿದ್ದು ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಅವರ ಮಗ ಹೇಮಂತ್ (19) ಗಾಯಗೊಂಡಿ ದ್ದಾರೆ.ಹೇಮಂತ್ ಬೈಕ್‌ನಲ್ಲಿ ಹೊರಟಿದ್ದರು ಮಾರ್ಗಮಧ್ಯೆಯೇ ನಿಯಂತ್ರಣ ತಪ್ಪಿದ ಬೈಕ್ ಉರುಳಿ ಬಿದ್ದಿದೆ.
ಇದರಿಂದಾಗಿ, ಬೈಕ್ ಸಮೇತ ರಸ್ತೆಯಲ್ಲಿ ಉರುಳಿ ಬಿದ್ದು ಹೇಮಂತ್ ಗಾಯಗೊಂಡಿದ್ದಾರೆ. ಹೇಮಂತ್ ಅವರ ಕಾಲಿಗೆ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಪ್ರಾಣಕ್ಕೆ ಅಪಾಯವಿಲ್ಲವೆಂದು ವೈದ್ಯರು ಹೇಳಿದ್ದು ಬೆಳ್ಳಂದೂರು ಸಂಚಾರ ಠಾಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಅಪಘಾತ ನಡೆದಿದ್ದು ಹೆಚ್ಚಿನ ಮಾಹಿತಿಯನ್ನು ಪೊಲೀಸರು ಸಂಗ್ರಹಿಸು ತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..