ವಿಜಯಪುರ –
ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಹಿಟ್ಟಿನಹಳ್ಳಿ ಬಳಿ ಘಟನೆ ನಡೆದಿದ್ದು, ಗಂಗಾರಾಮ ಚವ್ಹಾಣ(59) ಮೃತ ದುರ್ದೈವಿಯಾಗಿದ್ದಾರೆ.

ಅಪಘಾತದಲ್ಲಿ ನಾಗಠಾಣ JDS ಪಕ್ಷದ ಶಾಸಕ ದೇವಾನಂದ ಚವ್ಹಾಣ ಅವರ ದೊಡ್ಡಪ್ಪನ ಮಗ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಹಿಟ್ಟಿನಹಳ್ಳಿ ಬಳಿ ಈ ಒಂದು ಘಟನೆ ನಡೆದಿದೆ. ಗಂಗಾರಾಮ ಚವ್ಹಾಣ(59) ಮೃತರಾಗಿದ್ದಾರೆ.

ಎರಡು ಬೈಕ್ ಗಳ ಮದ್ಯೆ ಮುಖಾ ಮುಖಿ ಡಿಕ್ಕಿ ಸಂಭವಿಸಿದಾಗ ಅವಘಡ ನಡೆದಿದೆ. ಇನ್ನೊಂದು ಬೈಕ್ ಸವಾರನಿಗೂ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ದೇವರಹಿಪ್ಪರಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.