ಉಡುಪಿ –
ಕಾಲೇಜ್ ವೊಂದರ ಪ್ರಾಂಶುಪಾಲರೊಬ್ಬರಿಗೆ ಕೊಲೆ ಮಾಡುವ ವಿಚಾರದಲ್ಲಿ ಯುವಕನೊಬ್ಬ ಜೈಲು ಸೇರಿದ್ದಾನೆ ಹೌದು ಕುಂದಾಪುರದ ಆರ್ ಎನ್ ಶೆಟ್ಟಿ ಕಾಲೇಜಿನ ಪ್ರಿನ್ಸಿಪಾಲರಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಹಿಜಾಬ್ ಹಾಕಲು ಅವಕಾಶ ನೀಡದಿದ್ದರೆ ಕೊಲೆ ಮಾಡುವುದಾಗಿ ಕುಂದಾಪುರದ ಆರ್.ಎನ್.ಶೆಟ್ಟಿ ಕಾಲೇಜಿನ ಪ್ರಾಂಶುಪಾಲರಿಗೆ ಬೆದರಿಕೆ ವೊಡ್ಡಿದ್ದ ಅರೋಪಿಯನ್ನು ಬಂಧಿಸಲಾಗಿದೆ.

ಇಂಟರ್ನೆಟ್ ಕರೆಯ ಮೂಲಕ ಬೆದರಿಕೆ ಹಾಕಿದ್ದ ದುಷ್ಕ ರ್ಮಿಯ ಕರೆಯ ಜಾಡು ಹಿಡಿದು ಬಂಧಿಸಲಾಗಿದೆ. ಕೋಲಾರ ಕೆಜಿಎಫ್ ರಾಬರ್ಟ್ಸನ್ ಪೇಟೆ ನಿವಾಸಿ ಮೊಹ ಮ್ಮದ್ ಶಬೀರ್ ಬಂಧಿತ ಆರೋಪಿ.

ಪ್ರಾಂಶುಪಾಲರಿಗೆ ಕರೆ ಮಾಡಿ ನಿನ್ನ ಹೆಂಡತಿ ಮಕ್ಕಳನ್ನು ಕೊಲ್ಲುತ್ತೇನೆ ಎಂದು ಆರೋಪಿ ಬೆದರಿಕೆ ಹಾಕಿದ್ದ ಎಂಬ ಆರೋಪ ಕೇಳಿಬಂದಿತ್ತು.ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.