ಹೊಸ ವರ್ಷಾಚರಣೆ ದಿನದಂದು ರಾಜ್ಯದಲ್ಲಿ 16 ಕ್ಕೂ ಹೆಚ್ಚು ಜನರ ಸಾವು – ಸಂಭ್ರಮಾಚರಣೆಯಲ್ಲಿ ಅವಘಡದಿಂದ ರಾಜ್ಯದಲ್ಲಿ ನಿಧನರಾದವರ ಕಂಪ್ಲೀಟ್ ಮಾಹಿತಿ

Suddi Sante Desk
ಹೊಸ ವರ್ಷಾಚರಣೆ ದಿನದಂದು ರಾಜ್ಯದಲ್ಲಿ 16 ಕ್ಕೂ ಹೆಚ್ಚು ಜನರ ಸಾವು – ಸಂಭ್ರಮಾಚರಣೆಯಲ್ಲಿ ಅವಘಡದಿಂದ ರಾಜ್ಯದಲ್ಲಿ ನಿಧನರಾದವರ ಕಂಪ್ಲೀಟ್ ಮಾಹಿತಿ

ಬೆಂಗಳೂರು

ಈಗಾಗಲೇ ನಾವೆಲ್ಲರೂ 2022 ಕ್ಕೆ ಗುಡ್ ಬೈ ಹೇಳಿ ಹೊಸ ವರ್ಷವನ್ನು ಬರಮಾಡಿಕೊಂಡಿ ದ್ದೇವೆ ಇನ್ನೂ ಹೊಸ ವರ್ಷಾಚರಣೆಯ ಸಮ ಯದಲ್ಲಿ ರಾಜ್ಯದ ತುಂಬೆಲ್ಲಾ ನಡೆದ ಕಾರ್ಯ ಕ್ರಮಗಳಲ್ಲಿ 16 ಜನರಿಗಿಂತಲೂ ಹೆಚ್ಚು ಮೃತಪ ಟ್ಟಿದ್ದಾರೆ.

ಹೌದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ನಡೆದ ಅಪಘ ಡಗಳಲ್ಲಿ 16 ಮಂದಿ ಮೃತಪಟ್ಟಿರುವ ವರದಿಗಳು ಬೆಳಕಿಗೆ ಬಂದಿವೆ.ಶಿವಮೊಗ್ಗದ ವಿದ್ಯಾನಗರದಲ್ಲಿ ಮಂಜುನಾಥ್ ಓಲೇಕಾರ್ ಎಂಬುವರ ಮನೆ ಯಲ್ಲಿ ಸಂಭ್ರಮಾಚರಣೆ ವೇಳೆ ಗಾಳಿಯಲ್ಲಿ ಗುಂಡು ಮಿಸ್ ಫೈರ್ ಆಗಿ ಮಂಜುನಾಥ್ ಅವರ ಪುತ್ರ ಸ್ನೇಹಿತ ವಿನಯ್ ಎಂಬುವರಿಗೆ ಗುಂಡು ತಗುಲಿದ್ದು, ಚಿಕಿತ್ಸೆ ಫಲಕಾರಿಯಾಗದೇ ನಿಧನರಾ ಗಿದ್ದು.ಮಂಜುನಾಥ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬೆಂಗಳೂರಿನ ಕೊಟ್ಟಿಗೆಪಾಳ್ಯದಲ್ಲಿ ಪಕ್ಕದ ಕಟ್ಟಡಕ್ಕೆ ಜಿಗಿದು ಒಡಿಶಾದ ಬಾಪಿ ಎಂಬ ಕಾರ್ಮಿಕ ಮೃತರಾಗಿದ್ದು ಇನ್ನೂ ಇತ್ತ ಗುಡ್ಡ ದಹಳ್ಳಿಯಲ್ಲಿ ಲಾರಿ ಡಿಕ್ಕಿಯಾಗಿ ಯಾದಗಿರಿಯ ದೇವರಾಜು ಮೃತಪಟ್ಟಿದ್ದಾರೆ. ಚಿಂತಾಮಣಿಯ ಐಮರೆಡ್ಡಿಹಳ್ಳಿಯಲ್ಲಿ ದೊಡ್ಡಗಂಜೂರಿನ ನವೀನ್ ರೆಡ್ಡಿ ಕೊಲೆಯಾಗಿದ್ದಾನೆ.

ಬೆಳ್ತಂಗಡಿಯ ಗೋಳಿಯಂಗಡಿಯಲ್ಲಿ ಕಾರು ಬಸ್ ಡಿಕ್ಕಿಯಾಗಿ ಇಬ್ಬರು ನಿಧನರಾಗಿದ್ದಾರೆ.ಇತ್ತ ಅಂಕೋಲಾ ಬಾಳೆಗುಳಿಯಲ್ಲಿ ಕಾರು ಬಸ್ ಡಿಕ್ಕಿ ಯಾಗಿ ನಾಲ್ವರು ಮೃತಪಟ್ಟಿದ್ದಾರೆ.ಇತ್ತ ಚನ್ನಮ್ಮನ ಕಿತ್ತೂರಿನಲ್ಲಿ ಕಾರು ಡಿಕ್ಕಿಯಾಗಿ ಅಕ್ಷತಾ ಹುಲಿಕಟ್ಟೆ ಸಾವಿಗೀಡಾದರೆ ಇನ್ನೂ ಇತ್ತ ಸಂಸದ ರಾಘ ವೇಂದ್ರ ಅವರ ಫೋಟೋ ಗ್ರಾಫರ್ ಪ್ರಸನ್ನ ಕನಕಪುರ ಮಾವತ್ತೂರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಒಟ್ಟಾರೆ ಹೊಸ ವರ್ಷಾಚರಣೆಯ ದಿನದಂದು ರಾಜ್ಯದಲ್ಲಿ ಒಟ್ಟು 16 ಜನರು ಮೃತರಾಗಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.