ಶಾಲೆಯಲ್ಲಿ ಬಿಸಿಯೂಟ ಸೇವನೆ 30 ಕ್ಕೂ ಹೆಚ್ಚು ಮಕ್ಕಳಿಂದ ವಾಂತಿಭೇದಿ – ಆಸ್ಪತ್ರೆಗೆ ಮಕ್ಕಳು ದಾಖಲು ಚಿಕಿತ್ಸೆ ನೀಡುತ್ತಿರುವ ವೈಧ್ಯರು ಗುಣಮುಖರಾಗುತ್ತಿರುವ ಮಕ್ಕಳು…..

Suddi Sante Desk
ಶಾಲೆಯಲ್ಲಿ ಬಿಸಿಯೂಟ ಸೇವನೆ 30 ಕ್ಕೂ ಹೆಚ್ಚು ಮಕ್ಕಳಿಂದ ವಾಂತಿಭೇದಿ – ಆಸ್ಪತ್ರೆಗೆ ಮಕ್ಕಳು ದಾಖಲು ಚಿಕಿತ್ಸೆ ನೀಡುತ್ತಿರುವ ವೈಧ್ಯರು ಗುಣಮುಖರಾಗುತ್ತಿರುವ ಮಕ್ಕಳು…..

ನವಲಗುಂದ

ಗುಡಿಸಾಗರ ಪ್ರಾಥಮಿಕ ಶಾಲೆ ಮಧ್ಯಾಹ್ನದ ಬಿಸಿಯೂಟ ಸೇವನೆ ನಂತರ ಮಕ್ಕಳಲ್ಲಿ ವಾಂತಿ, ವಾಕರಿಕೆ ತಕ್ಷಣ ಸೂಕ್ತ ಚಿಕಿತ್ಸೆ ನೀಡಿದ ಆರೋಗ್ಯ ಇಲಾಖೆ.ಎಲ್ಲಾ ಮಕ್ಕಳು ಗುಣಮುಖ DHO  ಡಾ.ಶಶಿ ಪಾಟೀಲ ಮಾಹಿತಿ

ಹೌದು ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಮಧ್ಯಾಹ್ನ ಮಕ್ಕಳಿಗೆ ಬಿಸಿಯೂಟ ನೀಡಿ ದಾಗ ಅನ್ನದಲ್ಲಿ ಹಲ್ಲಿಯಂತ ಹುಳು ಕಂಡು ಬಂದಿದ್ದರಿಂದ ಊಟ ಸೇವಿಸಿದ ಸುಮಾರು 36 ಮಕ್ಕಳಲ್ಲಿ ವಾಂತಿ, ವಾಕರಿಕೆ ಕಂಡುಬಂದಿತು.

ವಿಷಯ ತಿಳಿದ ತಕ್ಷಣ ಶಲವಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗೆ ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ನವಲಗುಂದ ತಾಲೂಕಾ ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿತ್ತು ಅದರಂತೆ ಕ್ರಮ ಕೈಗೊಂಡಿ ದ್ದಾರೆ.

ಎಲ್ಲಾ ಮಕ್ಕಳು ಗುಣಮುಖರಾಗಿ, ಆರೋಗ್ಯವಾ ಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಗುಡಿಸಾಗರ ಪ್ರಾಥಮಿಕ ಶಾಲೆಗೆ ಇಂದು ಮದ್ಯಾಹ್ನದ ಪೂರೈಸಿದ ಊಟದಲ್ಲಿ ಹಲ್ಲಿಯಂತ ಹುಳು ಕಂಡು ಬಂದಿದ್ದರಿಂದ ಊಟ ಮಾಡಿದ್ದ ಕೆಲವು ಮಕ್ಕಳು ವಾಂತಿ ಮಾಡಿಕೊಳ್ಳಲು ಆರಂಭ ಮಾಡಿದ್ದಾರೆ.

ಕೆಲವು ಮಕ್ಕಳು ಹೆದರಿಕೆಯಿಂದ ವಾಕರಿಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ.ಶಾಲಾ ಮುಖ್ಯ ಸ್ಥರಿಂದ ಈ ಮಾಹಿತಿ ಬಂದ ತಕ್ಷಣ ಶಲವಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶೋಕ ಅಗರವಾಲ್ ಅವರಿಗೆ ತಕ್ಷಣ ಸ್ಥಳಕ್ಕೆ ತೆರಳಿ ಸೂಕ್ತ ಚಿಕಿತ್ಸೆ ನೀಡಲು ಸೂಚಿಸ ಲಾಗಿತ್ತು.

ಅದರಂತೆ ಅವರು ಮಕ್ಕಳಿಗೆ ಸ್ಥಳದಲ್ಲಿ ಪ್ರಾಥ ಮಿಕ ಚಿಕಿತ್ಸೆ ನೀಡಿದ್ದಾರೆ.ಮತ್ತು ಮುಂಜಾಗೃ ತೆಗಾಗಿ, ಹೆಚ್ಚಿನ ಚಿಕಿತ್ಸೆಗಾಗಿ ನವಲಗುಂದ ತಾಲೂಕಾ ಆಸ್ಪತ್ರೆಗೆ ಸುಮಾರು 36 ಮಕ್ಕಳನ್ನು ದಾಖಲಿಸಿದ್ದಾರೆ.ಅವರಿಗೆ ನವಲಗುಂದ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ವಿದ್ಯಾ ಹಾಗೂ ಡಾ. ಮಹೇಶ ನೇತೃತ್ವದಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ನೀಡಿದ್ದು ಬಹುತೇಕರು ಚೇತರಿಕೆಯಾಗಿದ್ದಾರೆ.

6 ಮಕ್ಕಳಿಗೆ ಮಾತ್ರ ವಾಂತಿ ಕಾರಣಕ್ಕಾಗಿ ಸಲೈನ್ ಹಚ್ಚಲಾಗಿತ್ತು ಅವರು ಸಹ ಸಂಜೆಯೊಳಗೆ ಸಂಪೂರ್ಣ ಚೇತರಿಕೆ ಆಗಿದ್ದಾರೆ.ಯಾವುದೇ ಮಕ್ಕಳಿಗೆ ಅಪಾಯವಿಲ್ಲ ಪಾಲಕರು ಗಾಬರಿಯಾ ಗದಂತೆ ಡಾ.ಶಶಿ ಪಾಟೀಲ ಅವರು ಮನವಿ ಮಾಡಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ, ಡಿ.ಎಸ್.ಓ ಡಾ.ಸುಜಾತಾ ಹಸವಿಮಠ, ಆರ್ಸಿ ಎಚ್‍ಓ ಡಾ.ಎಸ್.ಎಂ.ಹೊನಕೇರಿ ಅವರು ಸ್ಥಳದಲ್ಲಿದ್ದು ಮಕ್ಕಳ ಆರೋಗ್ಯ ಚಿಕಿತ್ಸೆ ಬಗ್ಗೆ ನಿಗಾವಹಿಸಿ, ಸೂಕ್ತ ಚಿಕಿತ್ಸೆ ನೀಡಿದ್ದಾರೆ

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.