ಹಾವೇರಿ –
ಸಾರಿಗೆ ಬಸ್ ಬ್ರೇಕ್ ಫೇಲ್ ಆಗಿ ಪಲ್ಟಿಯಾದ ಘಟನೆ ಹಾವೇರಿಯಲ್ಲಿ ನಡೆದಿದೆ.ಹಾವೇರಿಯ ಬ್ಯಾಡಗಿ ತಾಲೂಕು ಛತ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ರಸ್ತೆ ಮಧ್ಯದಲ್ಲಿ ಬಿದ್ದಿದೆ. ಬಸ್ಸು ಪಲ್ಟಿಯಾಗಿ ಬಿದ್ದ ಹಿನ್ನಲೆಯಲ್ಲಿ ಬಸ್ ನಲ್ಲಿದ್ದ 30 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು ಕೆಲ ವೊಬ್ಬರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯ ಗಳಾಗಿದ್ದು ಎಲ್ಲರನ್ನೂ ಬ್ಯಾಡಗಿ ಮತ್ತು ಗುತ್ತಲ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಂಜೆ ಹಾವೇರಿಯಿಂದ ರಾಣೆಬೆನ್ನೂರು ಕಡೆ ಹೋಗುತ್ತಿದ್ದ ಈ ಒಂದು ಸರಕಾರಿ ಬಸ್ಸು KA 42F 380 ಮಾರ್ಗಮಧ್ಯದಲ್ಲಿ ಬ್ಯಾಡಗಿ ತಾಲೂಕು ಛತ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ರಸ್ತೆ ಮಧ್ಯದಲ್ಲಿ ಸರಕಾರಿ ಬಸ್ಸು ಪಲ್ಟಿಯಾಗಿದೆ. 30 ಪ್ರಯಾಣಿಕರಿಗೆ ಗಾಯಗಳಾಗಿ ಕೆಲವೊಬ್ಬರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಮತ್ತು ಕೆಲವೊಬ್ಬರು ಪ್ರಯಾಣಿಕರಿಗೆ ತೀವ್ರವಾದ ಗಾಯಗಳಾಗಿದ್ದು ಯಾವುದೇ ರೀತಿಯ ಪ್ರಾಣಹಾನಿಯಾಗಿಲ್ಲ.
ಬಸ್ ಪಲ್ಟಿಯಾದ ಸುದ್ದಿ ಬರುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಹಾವೇರಿ, ಗುತ್ತಲ, ಬ್ಯಾಡಗಿ, ಸೇರಿದಂತೆ ನಾಲ್ಕು 108 ವಾಹನಗಳು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದರು.
ತೀವ್ರವಾಗಿ ಗಾಯಗೊಂಡ ಎಲ್ಲಾ ಪ್ರಯಾಣಿಕರನ್ನು 108 ಸಿಬ್ಬಂದಿ ಗಳು ರಾಣೆಬೆನ್ನೂರು ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಿಸಿದರು.ಗುತ್ತಲ 108 ಅಂಬುಲೆನ್ಸ್ ರಾಣೆಬೆನ್ನೂರು ಹಾವೇರಿ ಅಂಬುಲೆನ್ಸ್ ನ ಸಿಬ್ಬಂದಿ ಗಳು ಗಾಯಗೊಂಡಿರುವ ಪ್ರಯಾಣಿ ಕರಿಗೆ ಸೂಕ್ತ ಸಮಯದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲು ಮಾಡಿದರು.