ಧಣಿ ಹುಟ್ಟು ಹಬ್ಬದ ದಿನದಂದು ಕ್ಷೇತ್ರದಲ್ಲಿ ನಡೆಯಲಿದೆ ಬೃಹತ್ ಆರೋಗ್ಯ ಶಿಬಿರ ಅಮೃತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ 50 ಕ್ಕೂ ಹೆಚ್ಚು ವೈದ್ಯರು ನಡೆಯಿತು ಪೂರ್ವಭಾವಿ ಸಭೆ

Suddi Sante Desk
ಧಣಿ ಹುಟ್ಟು ಹಬ್ಬದ ದಿನದಂದು ಕ್ಷೇತ್ರದಲ್ಲಿ ನಡೆಯಲಿದೆ ಬೃಹತ್ ಆರೋಗ್ಯ ಶಿಬಿರ ಅಮೃತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ 50 ಕ್ಕೂ ಹೆಚ್ಚು ವೈದ್ಯರು ನಡೆಯಿತು ಪೂರ್ವಭಾವಿ ಸಭೆ

ಧಾರವಾಡ

ಪ್ರತಿಯೊಂದು ಕೆಲಸ ಕಾರ್ಯಗಳ ಮೂಲಕ ವಿಶೇಷವಾಗಿ ಕ್ಷೇತ್ರದಲ್ಲಿ ಜನರ ಸೇವೆಯನ್ನು ಮಾಡಿಕೊಂಡು ಬರುತ್ತಿರುವ ಧಾರವಾಡ ಗ್ರಾಮೀಣ ಪ್ರದೇಶದ ಶಾಸಕ ಅಮೃತ ದೇಸಾಯಿ ಈಗ ಮತ್ತೊಂದು ದೊಡ್ಡ ಪ್ರಮಾಣದಲ್ಲಿ ಇಡಿ ರಾಜ್ಯವು ಮೆಚ್ಚುವ ಕಾರ್ಯವನ್ನು ಮಾಡಲು ಹುಟ್ಟು ಹಬ್ಬದ ದಿನದಂದು ಮಾಡಲು ಈಗ ಮುಂದಾಗಿದ್ದಾರೆ

ಹೌದು ನವೆಂಬರ್ 16 ರಂದು ಶಾಸಕ ಅಮೃತ ದೇಸಾಯಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಒಂದು ವೇದಿಕೆಯ ಕಾರ್ಯಕ್ರಮ ವನ್ನು ಕೇಕ್ ಕಟ್ ಮಾಡುವ ಮೂಲಕ ಮಾಡಿ ಕೊಳ್ಳದೇ ಅದನ್ನು ಅರ್ಥಪೂರ್ಣ ವಾಗಿ ಜನರ ಸೇವೆಯನ್ನು ಮಾಡುತ್ತಾ ಆಚರಣೆ ಮಾಡಲು ಮುಂದಾಗಿದ್ದಾರೆ ಅದು ಬೃಹತ್ ಆರೋಗ್ಯ ಶಿಬಿರದ ಮೂಲಕ

ಕಳೆದ ವರ್ಷ ನೇತ್ರದಾನ ದೊಂದಿಗೆ ವಿಶೇಷವಾಗಿ ಆರೋಗ್ಯ ಶಿಬಿರ ವನ್ನು ಮಾಡಿ ಹುಟ್ಟು ಹಬ್ಬ ವನ್ನು ಆಚರಣೆ ಮಾಡಿಕೊಂಡಿದ್ದ ಇವರು ಈ ಬಾರಿ ಗರಗ ಗ್ರಾಮದಲ್ಲಿ ಅಮೃತ ದೇಸಾಯಿ ಗೆಳೆಯರ ಬಳಗ ದಿಂದ ಅಮೃತ ಆರೋಗ್ಯ ಸೇವೆ ಕಾರ್ಯಕ್ರಮ ವನ್ನು ಈ ಬಾರಿ ಹಮ್ಮಿಕೊಳ್ಳಲಾ ಗಿದ್ದು ಅದು ನವೆಂಬರ್ 16 ರಂದು ಗರಗ ಗ್ರಾಮ ದಲ್ಲಿ ನಡೆಯಲಿದೆ

ಸಾಮಾನ್ಯವಾಗಿ ಈ ಒಂದು ಆರೋಗ್ಯ ಶಿಬಿರ ಕಾರ್ಯಕ್ರಮ ದಲ್ಲಿ  ಹುಬ್ಬಳ್ಳಿ ಧಾರವಾಡ ದಿಂದ ಹೆಸರಾಂತ 50 ಕ್ಕೂ ಹೆಚ್ಚು ವೈದ್ಯರು ಪಾಲ್ಗೊಳ್ಳ ಲಿದ್ದು  ಪ್ರತಿಯೊಂದು ವೈಧ್ಯಕೀಯ ಸೇವೆಗಳು ಚಿಕಿತ್ಸೆ ಕುರಿತು ಪರೀಕ್ಷೆ ನಡೆಸಿ ಸಲಹೆ ಸೂಚನೆ ಗಳನ್ನು ನೀಡಿ ಉಚಿತ ವಾಗಿ ಔಷಧ ಗಳನ್ನು ನೀಡಲಾಗುತ್ತದೆ

ಈ ಬಾರಿ ಪ್ರಮುಖವಾಗಿ 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು ಹೀಗಾಗಿ ಈ ಒಂದು ಕುರಿತು ಎಲ್ಲಾ ಸಿದ್ದತೆ ಗಳನ್ನು ಮಾಡಲಾ ಗಿದ್ದು ಈ ಒಂದು ಕುರಿತು ಶಾಸಕ ಅಮೃತ ದೇಸಾಯಿ ಅವರು ಪರಿಶೀಲನೆ ನಡೆಸಿ ಸಭೆ ಮಾಡಿದರು

ಬೃಹತ್ ಆರೋಗ್ಯ ಶಿಬಿರದ ಮೂಲಕ ಕ್ಷೇತ್ರದ ಜನರಿಗೆ ದೊಡ್ಡ ಕೊಡುಗೆ ನೀಡಲು ಅದು ಉಪಯೋಗ ಆಗುವ ನಿಟ್ಟಿನಲ್ಲಿ ಮಾಡಲು ಆರೋಗ್ಯ ಶಿಬಿರದ ಮೂಲಕ ಮಾಡುತ್ತಿದ್ದಾರೆ ಹೀಗಾಗಿ ಈ ಒಂದು ಕುರಿತು ಗರಗ ಗ್ರಾಮದಲ್ಲಿ ಸಭೆ ಮಾಡಿ ಕಾರ್ಯಕ್ರಮ ದ ಸಿದ್ಧತೆ ಯನ್ನು ವೀಕ್ಷಣೆ ಮಾಡಿ ಚರ್ಚೆ ಮಾಡಿದರು

ಇನ್ನೂ ಪ್ರಮುಖವಾಗಿ ಪ್ರತಿಯೊಂದು ಗ್ರಾಮಕ್ಕೂ ಜನರು ಬರಲು ಅನುಕೂಲ ಆಗುವ ನಿಟ್ಟಿನಲ್ಲಿ ಎರಡು ವಾಹನಗಳ ವ್ಯವಸ್ಥೆ ಯನ್ನು ಮಾಡಲಾಗಿದೆ ನಂತರ ಊಟದ ವ್ಯವಸ್ಥೆ ಯನ್ನು ಕೂಡಾ ಮಾಡಲಾಗಿದೆ ಒಟ್ಟಾರೆ ಈ ಬಾರಿ ವಿಶೇಷವಾಗಿ ಅದ್ದೂರಿಯಾಗಿ ಈ ಒಂದು ಆರೋಗ್ಯ ಶಿಬಿರ ವನ್ನು ಹಮ್ಮಿಕೊಳ್ಳಲಾಗಿದ್ದು ಇದರ ಉಪಯೋಗ ವನ್ನು ತಗೆದುಕೊಳ್ಳುವಂತೆ ಶಾಸಕ ಅಮೃತ ದೇಸಾಯಿ ಅವರು ಕರೆ ನೀಡಿದರು

 

ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್ ಹಿರಿಯ ವರದಿಗಾರರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.