ಹುಬ್ಬಳ್ಳಿ –
ಡಿಪೋದಲ್ಲಿ ನಿಂತಲ್ಲೇ ನಿಂತುಕೊಂಡಿವೆ ಹತ್ತಕ್ಕೂ ಹೆಚ್ಚು ಬಸ್ ಗಳು ಎಷ್ಟು ನಿಂತಿವೆ ಯಾತಕ್ಕಾಗಿ ನಿಂತುಕೊಂಡಿವೆ ಮೊದಲು ನೋಡಿ DC ಸಾಹೇಬ್ರೆ – ಆರೇಳು ತಿಂಗಳನಿಂದಲೇ ನಿಂತಲ್ಲೇ ನಿಂತುಕೊಂಡ ಬಸ್ ದುರಸ್ತಿ ಕಾರ್ಯ ಆಗಲಿ ಮೊದಲು ಈ ಕೆಲಸವಾಗಲಿ ಆ ಮೇಲೆ…..
ಹುಬ್ಬಳ್ಳಿ ಧಾರವಾಡ ನಗರದ ಮಧ್ಯೆ ಓಡಾಡು ತ್ತಿರುವ ಚಿಗರಿ ಬಸ್ ಗಳು ಆರಂಭಗೊಂಡು ಐದು ವರ್ಷ ಕಳೆದಿದ್ದು ಸಧ್ಯ ಸರಿಯಾದ ನಿರ್ವಹಣೆ ಮತ್ತು ವ್ಯವಸ್ಥೆ ಇಲ್ಲದ ಪರಿಣಾಮ ವಾಗಿ ಡಿಪೋ ದಲ್ಲಿ ಇಪ್ಪತ್ತಕ್ಕೂ ಹೆಚ್ಚು ಬಸ್ ಗಳು ನಿಂತಲ್ಲೇ ನಿಂತುಕೊಂಡಿವೆ.ಯಾರ ಸಲಹೆ ಯಾರ ಸಲಹೆ ಸೂಚನೆಗಳನ್ನು ತಗೆದುಕೊಳ್ಳದೇ ಯಾರ ಮಾತನ್ನು ಕೇಳದೆ ಯಾರಿಗೂ ಬೇಡವಾಗಿ ಬಂದಿ ರುವ ಈ ಒಂದು ಬಸ್ ಗಳು ಇಂದು ಡ್ರೈವರ್ ಗಳಿಗೆ ದೊಡ್ಡ ತಲೆನೋವಾದರೆ
ಇದರೊಂದಿಗೆ ಚಾಲಕರಿಗೆ ಮತ್ತೊಂದು ದೊಡ್ಡ ತಲೆನೋವಿನ ಕೆಲಸ ಶುರವಾಗಿದೆ.ಹೌದು ಮೊದಲೇ ಅವ್ಯವಸ್ಥೆಯಂತಾಗಿರುವ ಬಸ್ ಗಳ ಕಥೆ ಒಂದೆಡೆಯಾದರೆ ಇನ್ನೂ ಹುಬ್ಬಳ್ಳಿ ಧಾರವಾಡ ಡಿಪೋ ದಲ್ಲಿ ಹತ್ತಕ್ಕೂ ಹೆಚ್ಚು ಬಸ್ ಗಳು ನಿಂತಲ್ಲೇ ನಿಂತುಕೊಂಡಿದ್ದು ಆರೇಳು ತಿಂಗಳುಗಳೆ ಕಳೆದಿದೆ.ಎರಡು ಡಿಪೋ ದಲ್ಲಿ ಹತ್ತಕ್ಕೂ ಹೆಚ್ಚು ಬಸ್ ಗಳು ದುರಸ್ತಿಯಾಗದೇ ನಿಂತುಕೊಂಡಿವೆ ಇವುಗಳಿಗೆ ಬೇಕಾದ ಸಾಮಾನುಗಳಾಗಲಿ ವಸ್ತುಗಳಾಗಲಿ ಹೀಗೆ ಏನು ಇಲ್ಲ ಹೀಗಾಗಿ ದುರಸ್ತಿಯಾಗದೇ ಈ ಒಂದು ಬಸ್ ಗಳು ನಿಂತಲ್ಲೇ ನಿಂತುಕೊಂಡಿದ್ದು ಇತ್ತ ಹೊರಗಡೆ ರಸ್ತೆ ಮೇಲೆ ದಿನದಿಂದ ದಿನಕ್ಕೆ ಬಸ್ ಗಳು ರಿಪೇರಿಗೆ ಬರುತ್ತಿದ್ದು
ಇದರಿಂದಾಗಿ ಡೂಟಿ ಮಾಡುವ ಚಾಲಕರಿಗೆ ದೊಡ್ಡ ತಲೆನೋವಿನ ಕೆಲಸವಾಗಿದೆ ಡಿಪೋ ಗಳಲ್ಲಿ ನಿಂತುಕೊಂಡಿರುವ ಬಸ್ ಗಳ ದುರಸ್ತಿ ಯನ್ನು ಮಾಡಿಸದೇ ವ್ಯವಸ್ಥೆಯನ್ನು ಸುಧಾರಣೆ ಮಾಡದೇ ಬಸ್ ಗಳಿಗೆ ಅವಶ್ಯಕವಾಗಿ ಬೇಕಾದ ಬೇಕಾಗುವ ವಸ್ತುಗಳನ್ನು ತರಿಸದೇ ಡಿಸಿ ಸಾಹೇಬ್ರು ಚಾಲಕರ ಮೇಲೆ ವಿನಾಕಾರಣ ಪ್ರತಿಯೊಂದಕ್ಕೂ ಶಿಕ್ಷೆಯನ್ನು ನೀಡುತ್ತಿದ್ದು ಹೀಗಾಗಿ ಏನು ಮಾಡಬೇಕು ಎಂಬ ದೊಡ್ಡ ಆತಂಕದಲ್ಲಿ ಚಾಲಕರಿದ್ದು ಮೊದಲು ಈ ಒಂದು ಕೆಲಸವಾಗಲಿ ಡಿಸಿ ಸಾಹೇಬ್ರೆ
ನಂತರ ಇಲಾಖೆಗೆ ದೊಡ್ಡ ಶಕ್ತಿಯಾಗಿರುವ ಡ್ರೈವರ್ ಗಳ ಮೇಲೆ ಕ್ರಮಕೈಗೊಳ್ಳಿ.ಮೊದಲು ಡಿಪೋ ಗೆ ಹೋಗಿ ಬರುತ್ತಿರುವ ನೀವು ಡಿಪೋ ದಲ್ಲಿ ಬಸ್ ಗಳು ಎಷ್ಟು ನಿಂತುಕೊಂಡಿವೆ ಯಾತಕ್ಕಾಗಿ ನಿಂತುಕೊಂಡಿವೆ ಒಮ್ಮೆ ನೋಡಿ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..